ಕ್ರಿಕೆಟ್ ಆಡುವಾಗ ಯುವಕ ಹೃದಯಾಘಾತದಿಂದ ಮೃತ್ಯು

ಕ್ರಿಕೆಟ್ ಆಡುವಾಗ ಯುವಕ ಹೃದಯಾಘಾತದಿಂದ ಮೃತ್ಯು

ಗುಜರಾತ್‌; 20 ವರ್ಷದ ಯುವಕನೊಬ್ಬ ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗುಜರಾತಿನ ಅರಾವಳಿಯಲ್ಲಿ ಯುವಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ.

ಮಾಹಿತಿಯ ಪ್ರಕಾರ, ಪರ್ವ ಸೋನಿ ಅವರು ಅರವಳ್ಳಿಯ ಮೊಡಸದಲ್ಲಿರುವ ಗೋವರ್ಧನ್ ಸೊಸೈಟಿಯಲ್ಲಿರುವ ಶ್ರೈನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಕ್ರಿಕೆಟ್ ಮೈದಾನದಲ್ಲಿ ಆಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸೋನಿ ಇಂಜಿನಿಯರಿಂಗ್ ಓದುತ್ತಿದ್ದರು.ಘಟನೆಯಿಂದ ಅವರ ಕುಟುಂಬ ದುಃಖತಪ್ತವಾಗಿದೆ.ಉತ್ತಮ ಕ್ರೀಡಾಪಟುವಾಗಿದ್ದ ಸೋನಿ, ಕ್ರಿಕೆಟ್ ಗೆ ಟ್ರೈನಿಂಗ್​ ಸಹ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಟಾಪ್ ನ್ಯೂಸ್