ಹರ ಹರ ಶಂಭು ಗಾಯಕಿ ಫರ್ಮಾನಿ ನಾಜ್ ಸಹೋದರನ ಬರ್ಬರ ಹತ್ಯೆ

ಹರ ಹರ ಶಂಭು ಗಾಯಕಿ ಫರ್ಮಾನಿ ನಾಜ್ ಸಹೋದರನ ಬರ್ಬರ ಹತ್ಯೆ

ಉತ್ತರಪ್ರದೇಶ; ವಿವಾದಿತ ಯೂಟ್ಯೂಬರ್ ಮತ್ತು ಗಾಯಕಿ ಫರ್ಮಾನಿ ನಾಜ್ ಅವರ ಸೋದರಸಂಬಂಧಿಯನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು 18 ವರ್ಷದ ಖುರ್ಷಿದ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಕೂಲಿ ಮಾಡುತ್ತಿದ್ದ.

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೊಹಮ್ಮದ್‌ಪುರ ಮಾಫಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶವು ರತನ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಾಪ್ತಿಗೆ ಬರುತ್ತದೆ.

ವರದಿಗಳ ಪ್ರಕಾರ, ಶನಿವಾರ ರಾತ್ರಿ 7:30 ರ ಸುಮಾರಿಗೆ ಪ್ರಾರ್ಥನೆ ಬಳಿಕ ಖುರ್ಷಿದ್ ಮನೆಗೆ ಮರಳುತ್ತಿದ್ದರು. ಈ ವೇಳೆ ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್ ಅವರನ್ನು ಸುತ್ತುವರಿದು ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೇ ಖುರ್ಷಿದ್​ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಈ ಘಟನೆ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ.

ಫರ್ಮಾನಿ ನಾಜ್​ 2022ರಲ್ಲಿ ಹಾಡಿದ ಹರ ಹರ ಶಂಭು ಹಾಡಿನಿಂದ ರಾತ್ರೋರಾತ್ರಿ ಪ್ರಖ್ಯಾತಿ ಗಳಿಸಿದ್ದರು.

ಟಾಪ್ ನ್ಯೂಸ್