ಸಂಸತ್ತಿನ ವಿಶೇಷ ಅಧಿವೇಶನ ಕರೆದ ಕಾರಣ ಬಹಿರಂಗಪಡಿಸಿದ ಕೇಂದ್ರ ಸರಕಾರ

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಂಸತ್ತಿನ 75 ವರ್ಷಗಳ ಇತಿಹಾಸದ ಕುರಿತು ಚರ್ಚೆ ನಡೆಯಲಿದೆ ಎಂದು ಸರಕಾರ ಸಂಜೆ ಬಹಿರಂಗ ಪಡಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದೆ.

ಲೋಕಸಭೆಯ ಸೆಕ್ರೆಟರಿಯೇಟ್‌ನ ಬುಲೆಟಿನ್‌ನಲ್ಲಿ ಸೆಪ್ಟೆಂಬರ್ 18 ರಂದು ಸಂವಿಧಾನ ಸಭೆಯಿಂದ ಪ್ರಾರಂಭವಾಗುವ 75 ವರ್ಷಗಳ ಸಂಸತ್ತಿನ ಪಯಣ,ಸಾಧನೆಗಳು, ಅನುಭವಗಳು,ನೆನಪುಗಳು ಮತ್ತು ಕಲಿಕೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದೆ.

ಶಾಸಕಾಂಗ ವ್ಯವಹಾರವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಛೇರಿಯ ಅವಧಿ) ಮಸೂದೆ, ಪೋಸ್ಟ್ ಆಫೀಸ್ ಬಿಲ್, ವಕೀಲರ (ತಿದ್ದುಪಡಿ) ಮಸೂದೆ, ಮತ್ತು ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

ಜಿ20 ಸಮಯದಲ್ಲಿ ಇಂಡಿಯಾ ಹೆಸರನ್ನು “ಭಾರತ” ಎಂದು ಅನೇಕ ಕಡೆಗಳಲ್ಲಿ ಬಳಸುವ ಮೂಲಕ ದೇಶದ ಹೆಸರನ್ನು “ಇಂಡಿಯಾ” ದಿಂದ ಭಾರತಕ್ಕೆ ಬದಲಾಯಿಸಬಹುದು ಎಂಬ ಊಹಾಪೋಹಗಳು ನಡೆದಿದ್ದವು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈಗ ಇಂತಹ ಯಾವುದೇ ಉದ್ದೇಶ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.

ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’, ಏಕರೂಪ ನಾಗರಿಕ ಸಂಹಿತೆ (UCC) ಮತ್ತು ಮಹಿಳಾ ಮೀಸಲಾತಿಯನ್ನು ಪರಿಚಯಿಸಲು ಮಸೂದೆಗಳನ್ನು ತರಬಹುದು ಎಂದು ಹೇಳಲಾಗಿತ್ತು. ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಬಹಿರಂಗಪಡಿಸಲು ಸರ್ಕಾರ ಮೊದಲು ನಿರಾಕರಿಸಿತ್ತು.

ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಸತತ ಸಭೆಗಳ ನಂತರ, ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮಣಿಪುರದಲ್ಲಿ
ಜನಾಂಗೀಯ ಹಿಂಸಾಚಾರ ಮತ್ತು ಕುಸ್ತಿಪಟುಗಳ ಪ್ರತಿಭಟನೆ ಸೇರಿದಂತೆ ಒಂಬತ್ತು ಸಂಭಾವ್ಯ ಚರ್ಚೆಯ ವಿಷಯಗಳನ್ನು ವಿವರಿಸಿದರು.

ಈ ಹಿಂದೆ ಟ್ವಿಟರ್‌ನಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್‌ನ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು, “ಸೋನಿಯಾ ಗಾಂಧಿಯವರ ಒತ್ತಡದ” ನಂತರ ಸರ್ಕಾರವು ಕಾರ್ಯಸೂಚಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್