ಯುವಕನಿಗೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ

ಚಿತ್ರದುರ್ಗ:ಯುವಕನೋರ್ವನಿಗೆ ಮಾರಕಾಸ್ತ್ರದಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದಲ್ಲಿ ನಡೆದಿದೆ.

ಬಸವರಾಜನ್ (33)ಮೃತರು.ಇವರು ಸ್ಟುಡಿಯೋ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು.

ಸ್ಟುಡಿಯೋ ಹಿಂದೆಯೇ ಬಸವರಾಜ್ ಮನೆ ಇತ್ತು. ಕೆಲಸ ಮುಗಿಸಿಸಿ ವರು ಎಂದಿನಂತೆ ಮನೆಗೆ ತೆರಳಿದ್ದಾರೆ. ಬಸವರಾಜ್ ಮನೆಯಲ್ಲಿ ಒಬ್ಬನೇ ಇರುವಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಚ್ಚಿನಿಂದ ಮನಸೋ ಇಚ್ಚೆ ಕೊಚ್ಚಿ ಕೊಲೆ ನಡೆಸಿ ಪರಾರಿಯಾಗಿದ್ದಾರೆ‌.

ಭೀಕರ ಹತ್ಯೆ ಮಾಹಿತಿ‌ ತಿಳಿದ ಕೂಡಲೇ ಎಸ್ಪಿ ಪರಶುರಾಮ್ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್