ಮಲಪ್ಪುರಂ;ಮೇ.7ರಂದು ಭಾನುವಾರ ಸಂಭವಿಸಿದ ಮಲಪ್ಪುರಂ ತಾನೂರ್ ದೋಣಿ ಅಪಘಾತದಲ್ಲಿ ಒಂದೇ ಕುಟುಂಬದ 11 ಮಂದಿ ಸಾವನ್ನಪ್ಪಿದ್ದಾರೆ ಮೃತರ ಎಲ್ಲರ ಅಂತ್ಯ ಸಂಸ್ಕಾರವನ್ನು ಒಂದೆ ಮಸೀದಿಯಲ್ಲಿ ಧಪನ ನಡೆಯಲಿದೆ.
ಪರಪ್ಪನಂಗಾಡಿ ಸಮೀಪದ ಮಸೀದಿಯಲ್ಲಿ ಜೆಸಿಬಿ ಮೂಲಕ ಉದ್ದವಾದ ಖಬರ್ ಸ್ಥಾನ ಮಾಡಿ ಅದಕ್ಕೆ ಇಟ್ಟಿಗೆಗಳನ್ನು ಕಟ್ಟಿ ಬೇರೆ ಬೇರೆಯಾಗಿ ವಿಭಜಿಸಲಾಗಿದೆ. ಅಕ್ಕ ಪಕ್ಕದಲ್ಲೇ 11 ಮಂದಿಯ ಧಪನ ನಡೆಯಲಿದೆ.
ಪರಪ್ಪನಂಗಾಡಿ ಕುನುಮ್ಮಾಲ್ ಕುಟುಂಬದ ಜೀನತ್ (43), ಆಕೆಯ ಪತಿ ಕುನ್ನುಮ್ಮಲ್ ಸೈತಲವಿ, ಅವರ ಮಕ್ಕಳಾದ ಹಸ್ನಾ (18), ಶಮ್ನಾ ( 16), ಶಫ್ಲಾ (13), ಮತ್ತು ದಿಲ್ನಾ (8). ಹೆಚ್ಚುವರಿಯಾಗಿ, ಸೈತಲವಿ ಅವರ ಸೊಸೆ ರಸೀನ (27), ಅವರ ಪುತ್ರಿಯರಾದ ಶಾಹದಾ (8), ರಿಷಿದಾ (7), ಫಾತಿಮಾ (10 ತಿಂಗಳು), ಸೈತಲವಿ ಅವರ ಸೊಸೆ ಆಯಿಷಾ ಮೆಹ್ರಿನ್ (18 ತಿಂಗಳು), ಮತ್ತು ಅವರ ಸಂಬಂಧಿ ಕುಂಜಿಮ್ಮು (48) ಮತ್ತು ಅವರು ಅಪಘಾತದಲ್ಲಿ ಮಗ ಜರೀರ್ (12) ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರಲ್ಲಿ 9 ಮಂದಿ ಒಂದೇ ಮನೆಯಲ್ಲಿ ವಾಸವಿದ್ದರು.ಮೂವರು ಬೇರೆ ಮನೆಯಲ್ಲಿ ವಾಸವಿದ್ದರು.ಕುಟುಂಬದ 15 ಮಂದಿ ಒಟ್ಟಿಗೆ ವಿಹಾರಕ್ಕೆ ತೆರಳಿದ್ದರು. ಇವರಲ್ಲಿ ನಾಲ್ವರು ಇನ್ನು ಚಿಕಿತ್ಸೆಯನ್ನು ಪಡೆಯುತ್ತಿದ್ದರು.ಘಟನೆಯಿಂದ ಪರಪ್ಪನಂಗಾಡಿಯಲ್ಲಿ ಸೂತಕದ ಛಾಯೆ ಮೂಡಿದೆ.
ಇನ್ನು ಅಪಘಾತದ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡವನ್ನು ಸಹ ರಚಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಬೋಟ್ ಮಾಲೀಕ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಅಪಘಾತಕ್ಕೀಡಾದ ಹಲವರು ಇನ್ನೂ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಸಾವಿನ ಸಂಖ್ಯೆ 22ಕ್ಕೆ ಏರಿದೆ.ಬದುಕುಳಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಮಲಪ್ಪುರಂ ಜಿಲ್ಲೆಯ ತಿರುರಂಗಡಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದು, ಬದುಕುಳಿದವರ ಆರೋಗ್ಯ ವಿಚಾರಿಸಿದ್ದಾರೆ.
ಕೇರಳ ಸರ್ಕಾರ ಕೂಡ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಸಂತ್ರಸ್ತರ ಕುಟುಂಬಗಳಿಗೆ 10ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಮುಖ್ಯಮಂತ್ರಿಗಳು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ಭಾನುವಾರ (ಮೇ7) ಪರಪ್ಪನಂಗಡಿಯಲ್ಲಿ ಓವರ್ ಲೋಡ್ ಡಬ್ಬಲ್ ಡೆಕ್ಕರ್ ಪ್ರವಾಸಿ ದೋಣಿ ಮುಳುಗಿ ಪೊಲೀಸ್ ಅಧಿಕಾರಿ ಸೇರಿದಂತೆ 22 ಜನರು ಸಾವನ್ನಪ್ಪಿದ್ದರು.ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.