ಫರಂಗಿಪೇಟೆ; ಬೈಕ್ ಗೆ ಬಸ್ ಢಿಕ್ಕಿ; ಬೈಕ್ ಸವಾರ ಮೃತ್ಯು

ಮಂಗಳೂರು:ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಫರಂಗೀಪೇಟೆ ಸಮೀಪದ ಅರ್ಕುಳ ದ್ವಾರದ ಬಳಿ ಇಂದು ನಡೆದಿದೆ.

ಕುಕ್ಕಾಜೆ ನಿವಾಸಿ ಹಂಝ ಯಾನೆ ರಮ್ಲಾನ್ ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇವರು ಮಂಗಳೂರು ಕಡೆಯಿಂದ ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ.

ಈ ವೇಳೆ ಹಂಝ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಇದೇ ಬೈಕ್ ನಲ್ಲಿ ರಮ್ಲಾನ್ ಅವರ ಪತ್ನಿ ರೈಹಾನ ಮತ್ತು ಅವರ ಮಗು ಇದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್