ಈಗೀಗ ಸಣ್ಣ ಜ್ವರ ಬಂದರೂ ಮೆಡಿಕಲ್ ಗೆ ಹೋಗಿ ಪ್ಯಾರಾಸಿಟಮಲ್ ಮಾತ್ರೆಯನ್ನು ಜನರು ತೆಗೆದುಕೊಳ್ಳುವುದು ಕಾಣಬಹುದು.ಆದರೆ ವೈದ್ಯರ ಶಿಫಾರಸ್ಸಿನ ಪ್ರಕಾರದಲ್ಲಿ ಮಾತ್ರೆ ಸೇವಿಸಿದರೆ ಮಾತ್ರೆಯಿಂದ ಪ್ರಯೋಜನವಾಗಬಹುದು. ಇಲ್ಲವಾದಲ್ಲಿ ಜನರ ಆರೋಗ್ಯದ ಮೇಲೆ ಬೇರೆ ರೀತಿಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ.
ನಾವು ಪ್ಯಾರಾಸಿಟಮಲ್ ಹಾಗೂ ಯಾವುದೇ ಮಾತ್ರೆ ಸೇವಿಸಿದ ಬಳಿಕ ಸಾಕಷ್ಟು ಪ್ರಮಾಣದ ನೀರು ಕುಡಿಯಬೇಕಿದೆ.
ಇನ್ನು ಪ್ಯಾರಾಸಿಟಮಲ್ ಮಾತ್ರೆಗಳನ್ನು ಖಾಲಿ ಹೊಟ್ಟೆಗೆ ಸೇವಿಸಬಾರದು.ನೀರಿನೊಂದಿಗೆ ಮಾತ್ರ ಇದನ್ನು ನುಂಗಬೇಕು.
ಜ್ಯೂಸ್, ಆಲ್ಕೋಹಾಲ್ ಜೊತೆ ಕುಡಿದರೆ ನಿರೀಕ್ಷಿತ ಲಾಭಗಳನ್ನು ಪಡೆಯಲು ಸಾಧ್ಯವಿಲ್ಲ.
ರಾತ್ರಿ ಅತಿಯಾಗಿ ಮದ್ಯಪಾನ ಮಾಡಿ ಬೆಳಗ್ಗೆ ಪ್ಯಾರಸಿಟಮಲ್ ತೆಗೆದುಕೊಳ್ಳುವುದು ಗಂಭೀರ ಸಮಸ್ಯೆ ಉಂಟು ಮಾಡಬಹುದು.
ಎರಡು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ವೈದ್ಯರ ಸಲಹೆ ಪಡೆಯದೆ ಪ್ಯಾರಸಿಟಮಲ್ ಮಾತ್ರೆಗಳನ್ನು ಕೊಡಬಾರದು.
ಮಿತಿಮೀರಿದ ಈ ಮಾತ್ರೆ ಸೇವನೆಯಿಂದ ಉಸಿರಾಟದ ತೊಂದರೆ, ಗಂಟಲು ನೋವು, ವಾಂತಿ ಮತ್ತಿತರ ಅಲರ್ಜಿ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇದೆ.