ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಲು ಕೊಟ್ಟಿದ್ದ ಗಡುವು ಮುಂದೂಡಿಕೆ

ಹೊಸದಿಲ್ಲಿ:ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವ ಗಡುವು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) PAN ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಜೂನ್ 30, 2023 ಕ್ಕೆ ವಿಸ್ತರಿಸಿದೆ.

ಮಾರ್ಚ್ 28, 2023 ರಂದು ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯಲ್ಲಿ ಈ ಆದೇಶ ಹೊರ ಬಿದ್ದಿದೆ. ತೆರಿಗೆದಾರರಿಗೆ ಹೆಚ್ಚಿನ ಸಮಯ, ಪಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ದಿನಾಂಕವನ್ನು 30 ಜೂನ್ 2023 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ.

ಮಾ.31 ಆಧಾರ್-ಪಾನ್ ಲಿಂಕ್ ಗೆ ಕೊನೆಯ ದಿನಾಂಕ ಎಂದು ಜನರು ಲಿಂಕ್ ಮಾಡಲು ಸೈಬರ್ ಗಳ ಮುಂದೆ ಮುಗಿ ಬೀಳುತ್ತಿದ್ದರು.ಇದೀಗ ದಿನಾಂಕ ಮುಂದೂಡಿಕೆಯಿಂದ ಕೊಂಚ ನಿರಾಳವಾಗಿದೆ.

ಟಾಪ್ ನ್ಯೂಸ್