ರಫೀಕ್ ಶೇಖ್ ಎಂಬ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಆಟೋ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾನೆಂದು ಆತನ ಕುಟುಂಬಸ್ಥರು ಯಾರದೋ ಮೃತದೇಹಕ್ಕೆ ಸಮಾಧಿ ಮಾಡಿ ಎಲ್ಲಾ ಕಾರ್ಯವನ್ನು ಮುಗಿಸಿದ್ದರು.
ಮಹಾರಾಷ್ಟ್ರ;ಸಮಾಧಿ ಮಾಡಿದ ವ್ಯಕ್ತಿ ಎರಡು ದಿನಗಳ ಬಳಿಕ ಗೆಳೆಯನಿಗೆ ಕರೆ ಮಾಡಿ ಮಾತನಾಡಿದ್ದು ವಿಚಿತ್ರ ಬೆಳವಣಿಗೆಯ ಘಟನೆ ಮಹಾರಾಷ್ಟ್ರದಿಂದ ವರದಿಯಾಗಿದೆ.
ರಫೀಕ್ ಶೇಖ್ ಎಂಬ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಆಟೋ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾನೆಂದು ಆತನ ಕುಟುಂಬಸ್ಥರು ಯಾರದೋ ಮೃತದೇಹಕ್ಕೆ ಸಮಾಧಿ ಮಾಡಿ ಎಲ್ಲಾ ಕಾರ್ಯವನ್ನು ಮುಗಿಸಿದ್ದರು.
ಆದರೆ ಇದೀಗ ಅಂತ್ಯ ಸಂಸ್ಕಾರದ ಎರಡು ದಿನಗಳ ಬಳಿಕ ಶವ ಸಂಸ್ಕಾರ ಮಾಡಲಾದ ವ್ಯಕ್ತಿ ಬದುಕಿದ್ದಾನೆಂದು ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಹೌದು ಮೃತ ಎಂದು ಹೇಳಲಾದ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ವಿಡಿಯೋ ಚಾಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಟುಂಬಸ್ಥರು ಯಾರದೋ ಮೃತದೇಹವನ್ನು ಮಗನ ಮೃತದೇಹವೆಂದು ಅಂತ್ಯ ಸಂಸ್ಕಾರ ಮಾಡಿದ್ದಾರೆ.ಆದರೆ ಈ ಬೆಳವಣಿಗೆ ಬಳಿಕ ಇದೀಗ ಪೊಲೀಸ್ ಸಮಾಧಿ ಮಾಡಲಾಗಿರುವ ವ್ಯಕ್ತಿಯ ಗುರುತು ಪತ್ತೆಗೆ ಮುಂದಾಗಿದ್ದಾರೆ.
ಜನವರಿ 29ರಂದು ಬೋಯ್ಸರ್ ಮತ್ತು ಪಾಲ್ಘರ್ ನಿಲ್ದಾಣಗಳ ನಡುವೆ ಹಳಿ ದಾಟುವಾಗ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ. ಸರ್ಕಾರಿ ರೈಲ್ವೆ ಪೊಲೀಸ್ ವ್ಯಕ್ತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗುರುತು ಪತ್ತೆ ಹಚ್ಚುವಂತೆ ಮನವಿ ಮಾಡಿಕೊಂಡಿದ್ದರು.ಈ ವೇಳೆ ರಫೀಕ್ ಕುಟುಂಬ ಮೃತದೇಹ ನಮ್ಮದು ಎಂದು ಗುರುತು ತಪ್ಪಾಗಿ ಪತ್ತೆ ಹಚ್ಚಿದ್ದು ಅನಾಹುತಕ್ಕೆ ಕಾರಣವಾಗಿದೆ.