ವಿವಾಹವಾದ ಕೆಲವೇ ದಿನಗಳಲ್ಲಿ ವಧು ಅಪಾಘಾತದಲ್ಲಿ ದುರ್ಮರಣ

ಪಾಲಕ್ಕಾಡ್;ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ಕೇರಳದ ಪಲಕ್ಕಾಡ್​​ನ ಕುರುಡಿಕಾಡ್ ಎಂಬಲ್ಲಿ ನಡೆದಿದೆ.

ಅನಿಶಾ(20) ಮೃತ ದುರ್ದೈವಿ.ಇವರು ಪುಥುಕೋಡ್​ನ ಕಣ್ಣನ್ನೂರ್​ ಮೂಲದವರು.ಕೊಯಮತ್ತೂರು ಮೂಲದ ಆಕೆಯ ಪತಿ ಶಾಕಿರ್​ (32) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅನಿಶಾ ಮತ್ತು ಶಾಕೀರ್​ ಇದ್ದ ಬೈಕ್​ ಪಲಕ್ಕಾಡ್​ನಿಂದ ಕೊಯಮತ್ತೂರಿಗೆ ತೆರಳಿತ್ತು.ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್ ಬೈಕ್​ಗೆ ಡಿಕ್ಕಿ ಹೊಡೆದಿದೆ.ಅಪಘಾತದ ಪರಿಣಾಮ ಅನಿಶಾ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್​ ಓಡಿಸುತ್ತಿದ್ದ ಶಾಕೀರ್​ಗೆ ಗಂಭೀರ ಗಾಯವಾಗಿದೆ.

ಅನಿಶಾ ಮತ್ತು ಶಾಕೀರ್ ಗೆ​ ಕಳೆದ ಜೂನ್​ 4ರಂದು ಮದುವೆಯಾಗಿದ್ದು, ವಿವಾಹವಾದ ಒಂದೇ ತಿಂಗಳಲ್ಲಿ ಅನಿಶಾ ದಾರುಣ ಸಾವಿಗೀಡಾಗಿದ್ದಾಳೆ.

ಟಾಪ್ ನ್ಯೂಸ್