ಪಾಕ್ ಗೆ ವಾಪಾಸ್ಸು ಮರಳಿದ ನವಾಜ್ ಷರೀಪ್; ಸುದೀರ್ಘ ಕಾಲ ಪ್ರಧಾನಿಯಾಗಿದ್ದ ಅವರು ಕೊನೆಗೆ ಪಾಕಿಸ್ತಾನವನ್ನು ತೊರೆದಿದ್ದೇಕೆ ಗೊತ್ತಾ?

ಇಸ್ಲಾಮಾಬಾದ್: ಕಳೆದ ನಾಲ್ಕು ವರ್ಷಗಳಿಂದ ಗಡೀಪಾರಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಶನಿವಾರ ಇಸ್ಲಾಮಾಬಾದ್‌ಗೆ ಮರಳಲಿದ್ದಾರೆ.

ಪಾಕ್ ನ ಸಾರ್ವತ್ರಿಕ ಚುನಾವಣೆಗೆ ತಿಂಗಳುಗಳ ಮೊದಲು ಇಸ್ಲಾಮಾಬಾದ್‌ಗೆ ಬರಲಿರುವ ನವಾಜ್ ಷರೀಫ್, ಲಾಹೋರ್‌ನ ಮಿನಾರ್-ಇ-ಪಾಕಿಸ್ತಾನದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪಿಎಂಎಲ್-ಎನ್ ಇನ್ನೂ ಜನಪ್ರಿಯ ಪಕ್ಷವಾಗಿದ್ದು,
ನವಾಜ್ ಷರೀಫ್ ಪಕ್ಷದ ಚುನಾವಣಾ ಪ್ರಚಾರವನ್ನು ಮುನ್ನಡೆಸುತ್ತಾರೆ. ಮುಂಬರುವ ಚುನಾವಣೆಯಲ್ಲಿ ಯಶಸ್ವಿಯಾಗುತ್ತಾರೆ. ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗುತ್ತಾರೆ ಎಂದು ಪಿಎಂಎಲ್-ಎನ್ ನಾಯಕರೊಬ್ಬರು ಹೇಳಿದ್ದಾರೆ.

ಷರೀಫ್ ಅವರು ನವೆಂಬರ್ 1990 ರಲ್ಲಿ ತಮ್ಮ 51 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯಾದರು. ಸತತ ಮೂರು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ಪನಾಮಾ ಪೇಪರ್ಸ್ ಸೋರಿಕೆಯಲ್ಲಿ ಅವರ ಹೆಸರು ಕೇಳಿ ಬಂದಿದ್ದರಿಂದ ನವಾಜ್ ಷರೀಫ್ ಅವರು 2017ರಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪನಾಮ ಪೇಪರ್ಸ್, 11.5 ಮಿಲಿಯನ್ ಸೋರಿಕೆಯಾದ ದಾಖಲೆಗಳ ಸೆಟ್ ಆಗಿದ್ದು, ಷರೀಫ್ ಕುಟುಂಬ ಮತ್ತು ಸಾವಿರಾರು ಇತರರ ಸಂಪತ್ತಿನ ವಿವರಗಳನ್ನು ಒಳಗೊಂಡಿತ್ತು. ಆದರೆ, ತಾನು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದು ಷರೀಫ್ ಸಮರ್ಥಿಸಿಕೊಂಡಿದ್ದಾರೆ.

ಅಲ್-ಅಜೀಜಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಅವರ 7 ವರ್ಷಗಳ ಜೈಲು ಶಿಕ್ಷೆಯ ಅರ್ಧದಷ್ಟು ಶಿಕ್ಷೆಯನ್ನು ಅನುಭವಿಸಿದ ನಂತರ ಷರೀಫ್ ಅನಾರೋಗ್ಯದ ಚಿಕಿತ್ಸೆಗಾಗಿ ನವೆಂಬರ್ 2019ರಲ್ಲಿ ಲಂಡನ್‌ಗೆ ತೆರಳಿದರು. ನಂತರ ಇಸ್ಲಾಮಾಬಾದ್‌ನ ಹೈಕೋರ್ಟ್‌ನಿಂದ ನಾಲ್ಕು ವಾರಗಳ
ಕಾಲ ಜಾಮೀನು ನೀಡಲಾಯಿತು. ಆದಾಗ್ಯೂ, ಅವರು ಹಿಂತಿರುಗಲಿಲ್ಲ. ಆನಂತರ ಅಲ್-ಅಜಿಜಿಯಾ ಮತ್ತು ಅವೆನ್‌ಫೀಲ್ಡ್ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರನ್ನು ಘೋಷಿತ ಅಪರಾಧಿ ಘೋಷಿಸಲಾಯಿತು. ಅಕ್ಟೋಬರ್ 19, 2023 ರಂದು, ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ (NAB) ಮಾಜಿ-ಪ್ರಧಾನಿ ಸಲ್ಲಿಸಿದ ಅರ್ಜಿಗಳನ್ನು ವಿರೋಧಿಸುವುದನ್ನು ತಪ್ಪಿಸಿದ ನಂತರ ಎರಡೂ ಪ್ರಕರಣಗಳಲ್ಲಿ ಷರೀಫ್ ಅವರಿಗೆ ರಕ್ಷಣಾತ್ಮಕ ಜಾಮೀನು ನೀಡಲಾಯಿತು.

ಟಾಪ್ ನ್ಯೂಸ್