ಗೇಮ್ ಆಪ್ ನಲ್ಲಿ ಪರಿಚಯವಾಗಿದ್ದ ಪ್ರಿಯಕರನಿಗೆ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಪಾಕಿಸ್ತಾನದ ಯುವತಿ!

ಬೆಂಗಳೂರು:ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ​​ ಯುವತಿ ಸೇರಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಕ್ರಾ ಜೀವನಿ(19) ಎಂಬ ಯುವತಿ ಗೇಮ್ ಆಪ್ ​ ಮೂಲಕ ಯುಪಿ ನಿವಾಸಿ ಮುಲಾಯಂ ಎಂಬಾತನ ಪರಿಚಯ ಮಾಡಿಕೊಂಡಿದ್ದಳು.ಬಳಿಕ ಪ್ರೀತಿಗೆ ತಿರುಗಿತ್ತು.

ನೇಪಾಳದ ಮೂಲಕ ಭಾರತದ ಗಡಿ ಪ್ರವೇಶಿಸಿದ್ದ ಪಾಕ್​ನ ಇಕ್ರಾ ಯುಪಿ ನಿವಾಸಿ ಮುಲಾಯಂ ಸಿಂಗ್ ಜೊತೆ ಮದುವೆ ಆಗಿದ್ದಳು.

ಬಳಿಕ ಇಕ್ರಾ, ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಪತಿ ಜೊತೆ ನೆಲೆಸಿದ್ದರು. ಸದ್ಯ ಪೊಲೀಸರು ಪಾಕ್ ಮಹಿಳೆ ಇಕ್ರಾ ಜೀವನಿ, ಮುಲಾಯಂ ಸಿಂಗ್ ಇಬ್ಬರನ್ನೂ ಬಂಧಿಸಿದ್ದಾರೆ.

ಇಕ್ರಾ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯಕ್ಕೆ ಮಾಹಿತಿ ನೀಡಿತ್ತು. ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ, ಮುಲಾಯಂನನ್ನು ಬಂಧಿಸಲಾಗಿದೆ.ಸದ್ಯ ಇಕ್ರಾಳನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ.

ಟಾಪ್ ನ್ಯೂಸ್