ಪೇಸ್ಟ್‌ ಎಂದು ಭಾವಿಸಿ ಇಲಿ ಪಾಷಾಣದಿಂದ ಹಲ್ಲುಜ್ಜಿದ ವ್ಯಕ್ತಿ ಸಾವು

ಪೇಸ್ಟ್‌ ಎಂದು ಭಾವಿಸಿ ಟ್ಯೂಬ್‌ನಲ್ಲಿದ್ದ ಇಲಿ ಪಾಷಾಣದಿಂದ ಹಲ್ಲುಜ್ಜಿ ಅಸ್ವಸ್ಥರಾಗಿ ವ್ಯಕ್ತಿಯೋರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.

ಮಡ್ಮಣ್‌ ನಿವಾಸಿ ವೆಂಕಪ್ಪ ಪೂಜಾರಿ(53) ಅವರು ನ. 1ರಂದು ಬೆಳಿಗ್ಗೆ ಪೇಸ್ಟ್‌ ಎಂದು ಭಾವಿಸಿ ಟ್ಯೂಬ್‌ನಲ್ಲಿದ್ದ ಇಲಿ ಪಾಷಾಣದಿಂದ ಹಲ್ಲುಜ್ಜಿ ಅಸ್ವಸ್ಥರಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಅಸ್ವಸ್ಥರಾದ ಅವರನ್ನು ಕೂಡಲೇ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ನ.6ರಂದು ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ದೀಪಕ್‌ ಕೋಟ್ಯಾನ್‌ ಅವರು ವೆಂಕಪ್ಪ ಪೂಜಾರಿ ಅಕಾಲಿಕ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು