ಪಡುಬಿದ್ರೆ; ಕಾರನ್ನು ಕಿ.ಮೀವರೆಗೆ ಎಳೆದೊಯ್ದ ಟಿಪ್ಪರ್; ಭಯಾನಕ ಘಟನೆಯ ವಿಡಿಯೋ ವೈರಲ್..

ಪಡುಬಿದ್ರ:ಟಿಪ್ಪರ್‌‌ ಒಂದು ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರ ಎಳೆದೊಯ್ದಿರುವ ಶಾಕಿಂಗ್ ಘಟನೆ ಪಡುಬಿದ್ರಿಯಲ್ಲಿ ನಡೆದಿದ್ದು, ಕಾರನ್ನು ಎಳೆದೊಯ್ಯವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರು ಹಾಗೂ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತವಾಗಿದೆ.ಈ ವೇಳೆ ಕಾರು ಹಿಂಬದಿ ಸಿಲುಕಿದ್ದರೂ ಟಿಪ್ಪರ್ ಚಾಲಕ ವೇಗವಾಗಿ ಟಿಪ್ಪರ್ ಓಡಿಸಿದ್ದಾನೆ.

ಬಳಿಕ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದು ಬೈದು ಸಾರ್ವಜನಿಕರು ನಿಲ್ಲಿಸಿದ್ದು, ಪಡುಬಿದ್ರಿ ಪೊಲೀಸರು ಟಿಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.

ಟಾಪ್ ನ್ಯೂಸ್