ಈ ರಾಜ್ಯದಲ್ಲಿ ಅಂಗಾಂಗ ದಾನ‌ ಮಾಡಿದರೆ ನಡೆಯಲಿದೆ ಸರಕಾರಿ ಗೌರವದಿಂದ ಅಂತ್ಯಸಂಸ್ಕಾರ

ಈ ರಾಜ್ಯದಲ್ಲಿ ಅಂಗಾಂಗ ದಾನ‌ ಮಾಡಿದರೆ ನಡೆಯಲಿದೆ ಸರಕಾರಿ ಗೌರವದಿಂದ ಅಂತ್ಯಸಂಸ್ಕಾರ

ತಮಿಳುನಾಡು;ಅಂಗಾಂಗ ದಾನ ಮಾಡುವವರ ಅಂತ್ಯ ಸಂಸ್ಕಾರವನ್ನು ಸಕಲ ಸರಕಾರಿ ಗೌರವದೊಂದಿಗೆ ಮಾಡಲಾಗುವುದು ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ ಅವರು ಹೇಳಿದ್ದಾರೆ.

ಸ್ಟಾಲಿನ್‌ ಅವರು ತಮ್ಮ ಎಕ್ಸ್ (ಟ್ವಿಟರ್) ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ತಮಿಳುನಾಡು ಅಂಗಾಂಗ ದಾನಗಳಲ್ಲಿ ದೇಶದಲ್ಲಿ ಮುಂದುವರಿದ ರಾಜ್ಯವಾಗಿದೆ. ಈ ಮೂಲಕ ನೂರಾರು ರೋಗಿಗಳಿಗೆ ಹೊಸ ಜೀವನ ಕೊಟ್ಟಿದೆ ಎಂದು ಹೇಳಿದ್ದಾರೆ.

ನೋವಿನ ಸಂದರ್ಭಗಳಲ್ಲಿ ತಮ್ಮ ಆತ್ಮೀಯರ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರುವ ಕುಟುಂಬಗಳ ನಿಸ್ವಾರ್ಥ ತ್ಯಾಗದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸ್ಟಾಲಿನ್ ಇದೇ ವೇಳೆ ಹೇಳಿದ್ದಾರೆ.

ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬದವರ ತ್ಯಾಗವನ್ನು ಗೌರವಿಸುವ ಸಲುವಾಗಿ ಸರ್ಕಾರವು ಅಂತ್ಯಕ್ರಿಯೆಗೆ ಸರ್ಕಾರಿ ಗೌರವವನ್ನು ನೀಡಲು ನಿರ್ಧರಿಸಿದೆ ಎಂದು ಸಿಎಂ ಎಂಕೆ ಸ್ಟಾಲಿನ್‌ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್