ದಿಂಡೋರಿ:ಸರಕಾರಿ ನೌಕರನೋರ್ವ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂತು ಹಾಕಿರುವ ಅಪರೂಪದ ಘಟನೆ ನಡೆದಿದೆ.
ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕ ಓಂಕಾರ್ ದಾಸ್ ಎಂಬಾತನ ಪತ್ನಿ ರುಕ್ಮಿಣಿ(45)ಮೃತಪಟ್ಟಿದ್ದು,ನಂತರ ತಮ್ಮ ಮನೆಯ ವರಾಂಡದಲ್ಲಿಯೇ ಓಂಕಾರ ಪತ್ನಿಯ ಮೃತದೇಹ ಹೂತಿದ್ದಾರೆ.
ಇವರು ತಮ್ಮ ಸಮುದಾಯದ ಸಂಪ್ರದಾಯವನ್ನು ಗೌರವಿಸಲೆಂದು ತನ್ನ ಹೆಂಡತಿಯ ಶವವನ್ನು ತನ್ನ ಮನೆಯೊಳಗೆ ಹೂತು ಹಾಕಿದ್ದಾರೆ.ಆದರೆ ನೆರೆಹೊರೆಯವರು ವಿರೋಧಿಸಿದ ನಂತರ,ಶವವನ್ನು ಹೊರತೆಗೆದು ಸ್ಮಶಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯೊಳಗೆ ಶವವನ್ನು ಹೂಳಲು ಅಲ್ಲಿನ ನಿವಾಸಿಗಳು ಮತ್ತು ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು.ಆದರೆ, ಮೊಗ್ರೆ ಅವರು ತಮ್ಮ ಹೆಂಡತಿ ಮೇಲಿನ ಪ್ರೀತಿಯಿಂದ ಈ ರೀತಿ ಮಾಡಿದ್ದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಈ ವೇಳೆ ಮನೆಯ ಆವರಣದಲ್ಲಿಯೇ ಸಮಾಧಿ ಮಾಡುವ ಪಣಿಕಾ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.