ಸಂಸತ್ತಿನ ಹಳೆಯ ಕಟ್ಟಡಕ್ಕೆ ಹೊಸ ಹೆಸರು ಸೂಚಿಸಿದ ಮೋದಿ

ನವದೆಹಲಿ;ಸಂಸತ್ತಿನ ಹಳೆಯ ಕಟ್ಟಡಕ್ಕೆ ಪ್ರಧಾನಿ ಮೋದಿ ಅವರು ಹೊಸ ಹೆಸರನ್ನು ಸೂಚಿಸಿದ್ದು, ಅದನ್ನು ಸಂವಿಧಾನ ಸದನ(ಸಂವಿಧಾನ ಭವನ) ಎಂದು ನಾಮಕರಣ ಮಾಡಿದ್ದಾರೆ.

ಪ್ರಧಾನಿ ಮೋದಿ ಹಳೆಯ ಸಂಸತ್ತಿನಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ಹಳೆಯ ಸಂಸತ್ತಿನ ಕಟ್ಟಡಕ್ಕೆ ಈ ಹೆಸರನ್ನು ಘೊಷಿಸಿದ್ದಾರೆ. ಬಳಿಕ ಸಂಸದರ ಜೊತೆ ಕಾಲ್ನಡಿಗೆಯಲ್ಲಿ ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳಿದ್ದಾರೆ.

ಪ್ರಧಾನಿ ಮೋದಿ ಸಂಸತ್ತಿನ ಭಾಷಣದಲ್ಲಿ, ನಾನು ನಿಮಗೆ ಮನವಿ ಮಾಡುತ್ತೇನೆ ಮತ್ತು ನೀವು ಈ ಮನವಿಯನ್ನು ಪರಿಗಣಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಈಗ ನಾವು ಸಂಸತ್ತಿನ ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ. ಈ ಹಳೆಯ ಸದನದ ವೈಭವವು ಎಂದಿಗೂ ಕುಸಿಯಬಾರದು. ನಾವು ಇದನ್ನು ‘ಹಳೆಯ ಸಂಸತ್ತು’ ಎಂದು ಕರೆಯಬಾರದು ಎಂದು ಹೇಳಿದ್ದಾರೆ.

ನೀವೆಲ್ಲರೂ ಅನುಮತಿ ನೀಡಿದರೆ, ಈ ಕಟ್ಟಡವನ್ನು ‘ಸಂವಿಧಾನ ಸದನ’ ಎಂದು ಕರೆಯಬೇಕೆಂದು ನಾನು ವಿನಂತಿಸುತ್ತೇನೆ, ಅದು ನಮಗೆ ಯಾವಾಗಲೂ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ನಾವು ಇದನ್ನು ‘ಸಂವಿಧಾನ ಸದನ’ ಎಂದು ಕರೆಯುವಾಗ, ಇಲ್ಲಿ ಕುಳಿತ ಆ ಮಹಾನ್ ವ್ಯಕ್ತಿಗಳ ನೆನಪುಗಳು ನಮಗೆ ಉಂಟಗುತ್ತದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್