ಒಡಿಶಾ;ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.277 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 1000 ಜನರು ಗಾಯಗೊಂಡಿದ್ದಾರೆ.
ಮೂರು ರೈಲುಗಳ ಅಪಘಾತದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ವಿದ್ಯುತ್ ಸ್ಪರ್ಶದಿಂದ ಸುಮಾರು 40 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಅವರ ಮೃತದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಲಕ್ಷಣಗಳಿಲ್ಲ ಎಂದು ಸೋಮವಾರ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಪೊಲೀಸ್ ಅಧಿಕಾರಿಯ ಹೇಳಿಕೆಯು ಎಫ್‌ಐಆರ್ ನಲ್ಲಿ ಕೂಡ ಉಲ್ಲೆಖವಿದೆ. ಅನೇಕ ಪ್ರಯಾಣಿಕರು ರೈಲುಗಳ ಡಿಕ್ಕಿಯಿಂದ ಸಾವು ಸಂಭವಿಸಿದರೆ.ಅನೇಕರು ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಸಬ್ ಇನ್ಸ್ಪೆಕ್ಟರ್ ಪಾಪು ಕುಮಾರ್ ನಾಯ್ಕ್ ಶನಿವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಾಖಲಿಸಿದ ಎಫ್ಐಆರ್ ನಲ್ಲಿ ಈ ಅಂಶ ಉಲ್ಲೇಖವಿದೆ ಎಂದು ವರದಿಯಾಗಿದೆ.
ರೈಲ್ವೇ ಹಳಿಗಳ ಮೇಲೆ ಅಳವಡಿಸಿದ್ದ ವಿದ್ಯುತ್ ತಂತಿ ತುಂಡಾದ ಕಾರಣ ವಿದ್ಯುತ್ ಶಾಕ್ ನಿಂದ ಕೂಡ ಹಲವಾರು ಮಂದಿಯ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.
ಹಲವಾರು ದೇಹಗಳು ಗುರುತು ಸಿಗದಷ್ಟು ವಿರೂಪಗೊಂಡಿದ್ದರೆ.ಇನ್ನು ಕೆಲವು ದೇಹಗಳಿಗೆ ಯಾವುದೇ ಹಾನಿಯಾಗಿಲ್ಲ.ಆದ್ದರಿಂದ ವಿದ್ಯುತ್ ಶಾಕ್ ನಿಂದ ಸಾವು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದಲ್ಲಿ ನಡೆದ ರೈಲು ದುರಂತದ ತನಿಖೆ ಈಗಾಗಲೆ ಸಿಬಿಐಗೆ ನೀಡಲಾಗಿದೆ.ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.100ಕ್ಕೂ ಅಧಿಕ ಮೃತದೇಹಗಳ ಗುರುತು ಪತ್ತೆ ಇನ್ನು ಕೂಡ ಸಾಧ್ಯವಾಗಿಲ್ಲ ಎನ್ನಲಾಗಿದೆ.