ಹೂವಿನ ಸಸಿ ಕದ್ದ ಆರೋಪದಲ್ಲಿ ನೆರೆಮನೆಯ ಬಾಲಕಿಯನ್ನು ಕೊಲೆ ಮಾಡಿದ ಮಹಿಳೆ? ಸಂಶಯ ಹುಟ್ಟುಹಾಕಿದ ಪ್ರಕರಣ

ಹೂವಿನ ಸಸಿ ಕದ್ದ ಆರೋಪದಲ್ಲಿ ನೆರೆಮನೆಯ ಬಾಲಕಿಯನ್ನು ಕೊಲೆ ಮಾಡಿದ ಮಹಿಳೆ? ಸಂಶಯ ಹುಟ್ಟುಹಾಕಿದ ಪ್ರಕರಣ

ಒಡಿಶಾ;ಹಳ್ಳಿಯೊಂದರಲ್ಲಿ ಹೂವಿನ ಸಸಿಯನ್ನು ಕದ್ದ ಆರೋಪದ ಮೇಲೆ ನೆರೆಮನೆಯಾಕೆಯಿಂದ ಹಲ್ಲೆಗೊಳಗಾದ ಬಾಲಕಿಯೊಬ್ಬಳು ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.ಘಟನೆ ಭಾರೀ ಸಂಶಯಕ್ಕೆ ಕಾರಣವಾಗಿದೆ.

13 ವರ್ಷದ ಬಾಲಕಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಬಾಲಕಿಯ ಪೋಷಕರು ಮಗಳನ್ನು ನೋಡಿಕೊಳ್ಳುವಂತೆ ನೆರೆಮನೆಯವರಿಗೆ ತಿಳಿಸಿ, ಭುವನೇಶ್ವರಕ್ಕೆ ಹೋಗಿದ್ದರು.

ಬಾಲಕಿ ಚೆಂಡ ಹೂ ಗಿಡಗಳನ್ನು ಕಿತ್ತು ಹಾಕಿದ್ದಾಳೆ ಎಂದು ನೆರೆಮನೆಯ ಲಕ್ಷ್ಮಿ ಮುರ್ಮು ಎಂಬಾಕೆ ಥಳಿಸಿದ್ದಾಳೆ. ಅಲ್ಲದೆ ಭುವನೇಶ್ವರದಲ್ಲಿದ್ದ ಬಾಲಕಿಯ ಪೋಷಕರಿಗೆ ಕರೆ ಮಾಡಿ ಬಾಲಕಿ ಹೂ ಗಿಡ ಕದ್ದಿದ್ದಾಳೆಂದು ಆರೋಪಿಸಿದ್ದಳು.

ಇದಾದ ಬಳಿಕ ಮನೆಯ ವರಾಂಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಹಳ್ಳಿಗೆ ಹಿಂದಿರುಗಿದ ಪೋಷಕರು,ನೆರೆಮನೆಯಾಕೆ ತಮ್ಮ ಮಗಳನ್ನು ಹೊಡೆದು ಸಾಯಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನೆರೆಮನೆಯ ಮಹಿಳೆಯನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್