ಮತ ಹಾಕಲು ಬಂದ ನರ್ಸಿಂಗ್ ವಿದ್ಯಾರ್ಥಿನಿಗೆ ಅಪಘಾತದಲ್ಲಿ ಗಂಭೀರ ಗಾಯ; ಸನಾ ಸಾವು ಬದುಕಿನ ನಡುವೆ ಹೋರಾಟ, ಪೋಷಕರು ಕಣ್ಣೀರು…
ರಾಯಚೂರು:ವೋಟ್ ಹಾಕಿ ಬೈಕ್‌ನಲ್ಲಿ ಮನೆಗೆ ತೆರಳುವಾಗ ಭೀಕರ ರಸ್ತೆ ಅಪಘಾತವಾಗಿ ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆ ಪಾಲಾಗಿದ್ದು, ಪೋಷಕರು ಕಂಗಾಲಾಗಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ಮುದಗಲ್ ಬಳಿ ನಡೆದಿದೆ.
ಸನಾ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಘಟನೆ ವಿದ್ಯಾರ್ಥಿನಿ.
ಮೇ.10ರಂದು ಮತದಾನ ಮಾಡಿ ಮನೆಗೆ ಹೋಗುವಾಗ ರಾಯಚೂರಿನ ಲಿಂಗಸುಗೂರಿನ ಮುದಗಲ್ ಬಳಿ ಅಪಘಾತವಾಗಿ ಸನಾ ಗಂಭೀರವಾಗಿ ಗಾಯಗೊಂಡಿದ್ದಾಳೆ.ಸನಾ ಧಾರವಾಡದಲ್ಲಿ ಬಿಎಸ್‌ಸಿ ನರ್ಸಿಂಗ್ ಓದುತ್ತಿದ್ದರು.ಅಫಘಾತದ ಪರಿಣಾಮ ವಿದ್ಯಾರ್ಥಿನಿಯ ಕೈ, ಕಾಲು ಮುರಿದಿದೆ ಜೊತೆಗೆ ಕಿಡ್ನಿ ಭಾಗದಲ್ಲಿ ಗಂಭೀರ ಗಾಯವಾಗಿದೆ.
ವಿದ್ಯಾರ್ಥಿನಿ ಸನಾ ಮೊದಲ ಬಾರಿಗೆ ಮತದಾನ ಮಾಡಲು ಧಾರವಾಡದಿಂದ ಹಟ್ಟಿಗೆ ಬಂದಿದ್ದಳು.ಮತದಾನ ಮಾಡಿ ಮುದಗಲ್‌ನಿಂದ ಹಟ್ಟಿಗೆ ಮರಳುವಾಗ ಬೈಕ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಈ ದುರಂತ ನಡೆದಿದೆ.
ವಿದ್ಯಾರ್ಥಿನಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಪೋಷಕರು ಬಡವರಾಗಿದ್ದು
ಮಗಳ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕಂಗಾಲಾಗಿದ್ದಾರೆ.ಮಗಳ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ.