ಭೋಪಾಲ್; ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹೆಣ್ಣು ಮಗುವಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಕಾದ ಕಬ್ಬಿಣದಿಂದ ಹೊಟ್ಟೆಯ ಮೇಲೆ ಬರೆ ಎಳೆದು ಗಾಯಗೊಳಿಸಿದ ಆಘಾತಕಾರಿ ಘಟನೆ ಭೋಪಲ್ ನಿಂದ ವರದಿಯಾಗಿದೆ.
ಶಹದೋಲ್ ಜಿಲ್ಲೆಯ ಆದಿವಾಸಿ ಪ್ರದೇಶದಲ್ಲಿ ಜ್ವರದಿಂದ ಬಳಲುತ್ತಿದ್ದ ಮಗುವಿಗೆ 51 ಬಾರಿ ಕಬ್ಬಿಣದಿಂದ ಬರೆ ಹಾಕಲಾಗಿದೆ. ಕಾದ ಕಬ್ಬಿಣದ ಬರೆ ಹಾಕಿದರೆ ಗುಣಮುಖವಾಗುತ್ತದೆ ಎಂಬ ಮೂಢನಂಬಿಕೆ ಈ ಭಾಗದ ಜನರಿಗಿದೆ.
ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಮಗು ಮೃತಪಟ್ಟಿದೆ.ಇದೀಗ ಮಕ್ಕಳ ಕಲ್ಯಾಣ ಇಲಾಖೆಯಿಂದ ಆರೋಪಿ ಮಹಿಳೆ ವಿರುದ್ಧ ದೂರು ನೀಡಲಾಗಿದೆ.
ಮಗುವಿನ ಮೃತದೇಹ ಹೂಳಲಾಗಿದೆ ಎನ್ನಲಾಗಿದ್ದು, ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.