ಭಾರೀ ಮಳೆಗೆ ತತ್ತರಿಸಿದ ಉತ್ತರ ಭಾರತ; ಕೊಚ್ಚಿಕೊಂಡು ಹೋದ ವಾಹನಗಳು, ಪಟ್ಟಣಕ್ಕೆ ನುಗ್ಗಿದ ಪ್ರವಾಹ, ಹಲವರು ಸಾವು

ಉತ್ತರಭಾರತದಲ್ಲಿ ಭಾರಿ ಮಳೆಗೆ ಹಲವು ರಾಜ್ಯಗಳು ತತ್ತರಿಸಿದೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತದಿಂದ ಹಲವು ಗ್ರಾಮಗಳೇ ಸರ್ವನಾಶವಾಗಿದೆ. ಭೀಕರ ಪ್ರವಾಹದಲ್ಲಿ ಮನೆಗಳು, ವಾಹನಗಳು ಕೊಚ್ಚಿ ಹೋಗಿದೆ.ಭಾರಿ ಮಳೆಯಿಂದ ಇದುವರೆಗೆ 19 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹಿಮಾಚಲ ಪ್ರದೇಶದ ನದಿಗಳು ಅಪಾಯ ಮೀರಿ ಹರಿಯುತ್ತಿರುವ ಕಾರಣ ಸೇತುವೆ, ನದಿ ಪಾತ್ರದ ಕಟ್ಟಡ, ಮನಗಳು ನೀರಿನಲ್ಲಿ ಕೋಚ್ಚಿ ಹೋಗುತ್ತಿದೆ. ಪ್ರವಾಹಕ್ಕೆ ಸಿಲುಕಿದ ಬಸ್ ಕೊಚ್ಚಿ ಹೋಗಿದೆ. ಆದರೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಹಿಮಾಚಲ ಪ್ರದೇಶದ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ 10 ಜಿಲ್ಲೆಗಳಲ್ಲಿ ಭೂಕುಸಿತ, ಪ್ರವಾಹ ಸೃಷ್ಟಿಯಾಗಿದೆ. ತುನಾಗ್ ಬಜಾರ್‌ನ ಮಂಡಿ ಬಳಿಯ ಗುಡ್ಡ ಕುಸಿದು ಸಂಪೂರ್ಣ ಮಣ್ಣ ಹಾಗೂ ಮರಗಳ ಮಿಶ್ರಿತ ಪ್ರವಾಹ ನೀರು ಪಟ್ಟಣಕ್ಕೆ ನುಗ್ಗಿದೆ. ಇಡೀ ಪಟ್ಟಣವೇ ಕೆಸರು ನೀರಿನಲ್ಲಿ ತುಂಬಿ ಹೋಗಿದೆ. ಹಲವು ಮನೆಗಳು ಮಣ್ಣು ಪಾಲಾಗಿದೆ. ಎರಡು, ಮೂರು ಅಂತಸ್ತಿನ ಮನೆಗಳ ಒಳಗೂ ಕೆಸರು ತುಂಬಿಕೊಂಡಿದೆ. ಗುಡ್ಡ ಕುಸಿತ ಪರಿಣಾಮ ಭಾರಿ ಗಾತ್ರದ ಮರಗಳು ಮನೆಗೆ ಬಡಿದು ಹಲವು ಮನೆಗಳು ಕುಸಿದಿದೆ.

ಮಂಡಿ ಪಕ್ಕದಲ್ಲಿನ ಗ್ರಾಮವೊಂದು ಭೂಕುಸಿದ ಪರಿಣಾಮ ಕೊಚ್ಚಿ ಹೋಗಿದೆ. ಬೃಹತ್ ಪರ್ವತವೇ ಕುಸಿದಿದೆ. ಇದರ ಮಣ್ಣು ಕಲ್ಲು ಹಾಗೂ ಪ್ರವಾಹ ನೀರಿನಿಂದ ಇಡೀ ಗ್ರಾಮವೇ ಕೊಚ್ಚಿ ಹೋಗಿದೆ. ಸಣ್ಣ ಗ್ರಾಮದಲ್ಲಿದ್ದ ಕೆಲವೇ ಕೆಲವು ಮನೆಗಳು ಭೂಕುಸಿತದಿಂದ ಕೊಚ್ಚಿ ಹೋಗಿದೆ. ಇದೀಗ ಇಡೀ ಗ್ರಾಮದಲ್ಲಿ ಸಂಪೂರ್ಣ ಮಣ್ಣು, ಕಲ್ಲು ಬಂಡೆ ಹಾಗೂ ಮರಗಳು ತುಂಬಿಕೊಂಡಿದೆ.

ಹಿಮಾಚಲಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌, ರಾಜಸ್ಥಾನ, ಪಂಜಾಬ್‌, ಹರ್ಯಾಣ ಭಾರೀ ಮಳೆಗೆ ತತ್ತರಿಸಿರುವ ರಾಜ್ಯಗಳಾಗಿವೆ.

ಟಾಪ್ ನ್ಯೂಸ್