ಶಾದಿ ಡಾಟ್ ಕಾಮ್ ನಲ್ಲಿ ಪರಿಚಯವಾದ ಯುವತಿಗೆ ಸುಳ್ಳು ಹೇಳಿ ದೈಹಿಕ ಸಂಪರ್ಕ, ಇನ್ನೊಬ್ಬಳ ಜೊತೆ ನಿಖಾಹ್, ಆರೋಪಿ ವಿರುದ್ಧ ದೂರು ದಾಖಲು

ಶಾದಿ ಡಾಟ್ ಕಾಮ್ ನಲ್ಲಿ ಪರಿಚಯವಾದ ಯುವತಿಗೆ ಸುಳ್ಳು ಹೇಳಿ ದೈಹಿಕ ಸಂಪರ್ಕ, ಇನ್ನೊಬ್ಬಳ ಜೊತೆ ನಿಖಾಹ್, ಆರೋಪಿ ವಿರುದ್ಧ ದೂರು ದಾಖಲು

ಬೆಂಗಳೂರು; ಶಾದಿ ಡಾಟ್​ ಕಾಮ್​ನಲ್ಲಿ ಪರಿಚಯವಾದ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನಡೆಸಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತ ಯುವತಿ ತಂದೆ-ತಾಯಿ ಕಳೆದುಕೊಂಡು ಮಾವನ ಮನೆಯಲ್ಲಿ ಆಸರೆ ಪಡೆದಿದ್ದಳು.
ಮದುವೆ ಸಲುವಾಗಿ ಶಾದಿ ಡಾಟ್ ಕಾಮ್​​ನಲ್ಲಿ ಫೋಟೋ ಮತ್ತು ಪ್ರೊಫೈಲ್ ಹಾಕಿದ್ದಳು. ಈ ವೇಳೆ ನೂಮಾನ್ ಷರೀಫ್ ಎಂಬಾತನ ಪರಿಚಯವಾಗಿತ್ತು. ನಂತರ ಮದುವೆ ಆಗುವುದಾಗಿ ನಂಬಿಸಿ, ಓಯೋ ರೂಮ್​​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹೆಬ್ಬಾಳದ ಹೊಟೇಲ್​​ನಲ್ಲಿ ಪೋಷಕರನ್ನು ಭೇಟಿ ಮಾಡಿಸುವುದಾಗಿ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ.ಬಳಿಕ ಮತ್ತೊಬ್ಬ ಯುವತಿ ಜೊತೆ ನಿಕಾಹ್ ಮಾಡಿಕೊಂಡಿದ್ದಾನೆ.

ಇದೀಗ ನೊಂದ ಯುವತಿ ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ ಎಂದು ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ನೂಮಾನ್ ಷರೀಫ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ‌‌.

ಟಾಪ್ ನ್ಯೂಸ್