ನಿತ್ಯಾನಂದನ ಜೊತೆ ನನ್ನ ಇಬ್ಬರು ಹೆಣ್ಣು ಮಕ್ಕಳು ವಾಸಿಸುತ್ತಿದ್ದಾರೆ-ಭಾವುಕರಾಗಿ ಹಿರಿಯ‌‌ ನಟ ಏನೆಲ್ಲಾ ಹೇಳಿದ್ರು?

ನವದೆಹಲಿ;ನಿತ್ಯಾನಂದ ಸ್ವಾಮೀಜಿ ತಮ್ಮ ಜೀವನದಲ್ಲಿ ಎಷ್ಟು ಹಾನಿ ಎಸಗಿದ್ದಾರೆಂದು ಹಿರಿಯ ನಟ ಅಶೋಕ್ ಕುಮಾರ್
ಮೊದಲ ಬಾರಿ ನೋವು ಹೊರ ಹಾಕಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ನಿತ್ಯಾನಂದನ ಭಕ್ತೆಯಾಗಿ ಸಿಡಿ ಪ್ರಕರಣದಲ್ಲಿ ಸುದ್ದಿಯಾಗಿದ್ದ ನಟಿ ರಂಜಿತಾ ತಂದೆ ಅಶೋಕ್ ಕುಮಾರ್ ಅವರು ನೋವು ಹೊರ ಹಾಕಿದ್ದಾರೆ.

ಹೈದರಾಬಾದ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದೆ, ಆ ಸಮಯದಲ್ಲಿ ನನ್ನ ದಾಂಪತ್ಯ ಜೀವನ ಹಾಳಾಗಿದ್ದರಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಹೋಟೆಲ್ ನಡೆಸುತ್ತಿದ್ದೆ.

ಆದರೆ ದಿವಾಳಿತನದಿಂದಾಗಿ ನನ್ನ ಸೋದರ ಮಾವ ಹೋಟೆಲ್ ಅನ್ನು ವಹಿಸಿಕೊಂಡರು. ಏನು ಮಾಡಬೇಕೆಂದು ತಿಳಿಯದೆ ಮದ್ರಾಸಿಗೆ ಬಂದೆ. ಆ ಸಮಯದಲ್ಲಿ ಸಿನಿಮಾ ಅವಕಾಶಗಳು ಬಂದವು.ನಂತರ ಖಳನಾಯಕ ಪಾತ್ರಗಳಿಗೆ ಅವಕಾಶಗಳು ದೊರೆತವು ಎಂದು ಹೇಳಿದ್ದಾರೆ.

ನನಗೆ ಮೂವರು ಹೆಣ್ಣು ಮಕ್ಕಳು.ಆ ಹುಡುಗಿಯರು ನನ್ನಿಂದಾಗಿ ನರಳುತ್ತಿದ್ದರು ಎಂದು ಮದ್ರಾಸಿಗೆ ಕರೆದುಕೊಂಡು ಬಂದೆ.ಮೂವರಿಗೆ ಚೆನ್ನಾಗಿ ಓದಿಸಿದ್ದೇನೆ. ಮೂವರೂ ಮದುವೆಯಾದರು.ಇಬ್ಬರು ವಿಚ್ಛೇದನ ಪಡೆದರು. ನಿತ್ಯಾನಂದನ ವಿಷಯದ ಕಾರಣದಿಂದ ರಂಜಿತಾ ಹೈಲೈಟ್ ಆಗಿದ್ದಳು. ಆದರ ನಂತರ ರಂಜಿತಾ ಮತ್ತು ಪತಿ ವಿಚ್ಛೇದನ ಪಡೆದಿದ್ದಾರೆ.

ಹಿರಿಯ ಮಗಳು ಕೂಡ ಪತಿಗೆ ವಿಚ್ಛೇದನ ನೀಡಿ ನಿತ್ಯಾನಂದನ ಬಳಿ ಹೋಗಿದ್ದಾಳೆ. ಮೋಕ್ಷ ಮತ್ತು ಭಕ್ತಿಯಿಂದ ನಾವು ಇಲ್ಲಿ ಸಂತೋಷವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಆದರೆ ನಾನು ಇಬ್ಬರಿಗೂ ಶಾಪ ಹಾಕಿದ್ದೇನೆ. ಸಿಟ್ಟಿನಲ್ಲಿ ನಿತ್ಯಾನಂದನ ಬಳಿಗೆ ಹಲವಾರು ಬಾರಿ ಹೋಗಿದ್ದೆ. ನಿನಗೆ ನಾಚಿಕೆ ಆಗುತ್ತಿಲ್ಲವೇ?ನನ್ನ ಮಗಳನ್ನು ನಿಮ್ಮ ಆಶ್ರಮದಿಂದ ವಾಪಸ್ ಕಳುಹಿಸುವಂತೆ ಕೇಳಿಕೊಂಡಿದ್ದೇನೆ ಎಂದ ನಟ‌ ನನ್ನ ಮಕ್ಕಳ ಬದುಕನ್ನು ನಿತ್ಯಾನಂದ ಹಾಳು ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ.

ನಮ್ಮ 3ನೇ ಮಗಳು ನನ್ನನ್ನು ನೋಡಿಕೊಳ್ತಿದ್ದಾರೆ. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು ಎಂದು ಭಾವುಕರಾಗಿದ್ದಾರೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com