“ಬೆತ್ತಲೆ” ತೋರಿಸುವ ಕನ್ನಡಿ ಆಸೆಗೆ 9 ಲಕ್ಷ ಕಳೆದುಕೊಂಡ ವೃದ್ಧ!

ಬೆತ್ತಲೆಯಾಗಿ ತೋರಿಸುವ ಕನ್ನಡಿ ಆಸೆಗೆ ವ್ಯಕ್ತಿಯೋರ್ವ 9 ಲಕ್ಷ ರೂ.ಕಳೆದುಕೊಂಡ ಬಗ್ಗೆ ವರದಿಯಾಗಿದೆ.

ಉತ್ತರಪ್ರದೇಶದ ಅವಿನಾಶ್‌ ಕುಮಾರ್‌ ಶುಕ್ಲಾ(74) ಬರೋಬ್ಬರಿ 9 ಲಕ್ಷ ರೂ.ಕಳೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಪಾರ್ಥ ಸಿಂಘ್ರಾಯ್‌, ಮೊಲಯ ಸರ್ಕಾರ್‌, ಸುದೀಪ್ತ ಸಿನ್ಹಾ ರಾಯ್‌ರನ್ನು ಒಡಿಶಾದ ನಯಾಪಲ್ಲಿ ಪೊಲೀಸರು ಬಂಧಿಸಿದ್ದಾರೆ.ಅವರಿಂದ ಕಾರು ಮತ್ತು 28,000 ರೂ. ನಗದು, ಕೆಲ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಸಿಂಗಾಪುರದ ಖ್ಯಾತ ಕಂಪನಿಯೊಂದರ ಉದ್ಯೋಗಿಗಳಂತೆ ಬಂದು ಅವಿನಾಶ್‌ ಗೆ ಪರಿಚಯ ಮಾಡಿಕೊಂಡಿದ್ದಾರೆ.ಬಳಿಕ ಇವರ ಅದ್ಭುತ ಕನ್ನಡಿ ಬಗ್ಗೆ ಹೇಳಿದ್ದಾರೆ.ಆ ಕನ್ನಡಿ ಮೂಲಕ ನೋಡಿದರೆ ಎದುರಿರುವ ವ್ಯಕ್ತಿ ನಿಮಗೆ ಬೆತ್ತಲೆಯಾಗಿ ಕಾಣುತ್ತಾನೆ.ನಾಸಾ ಕೂಡ ಅದನ್ನು ಬಳಸುತ್ತದೆ.ಅದರ ಬೆಲೆ 2 ಕೋಟಿ ರೂ.ಇದೆ ಎಂದು ಹೇಳಿದ್ದಾರೆ.

ಭುವನೇಶ್ವರದ ಹೋಟೆಲ್‌ಗೆ ಅವಿನಾಶ್‌ರನ್ನು ಕರೆಸಿ 9 ಲಕ್ಷ ವಸೂಲಿ ಮಾಡಿದ್ದಾರೆ.ಆದರೆ ಆ ಬಳಿಕ ಅವರಿಗೆ ಮೋಸ ಹೋಗಿರುವುದು‌ ಮನವರಿಕೆಯಾಗಿದೆ.

ಟಾಪ್ ನ್ಯೂಸ್