ಪೊಲೀಸರು ಲಂಚ ಕೇಳಿದ್ದಾರೆಂದು ನೋಟುಗಳ ರಾಶಿಯನ್ನು ರಸ್ತೆಯಲ್ಲಿ ಎಸೆದು ನಿಮಗೆ ಬೇಕಾದಷ್ಟು ತಗೊಳ್ಳಿ ಎಂದು ಕೂಗಾಡಿದ ಮಹಿಳೆ;ವಿಡಿಯೋ ವೈರಲ್..
ನೀಮಚ್:ಮಧ್ಯಪ್ರದೇಶದ ನೀಮಚ್‌ನಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ಹೈಡ್ರಾಮ ನಡೆಸಿದ್ದಾರೆ.ರಸ್ತೆಯಲ್ಲಿ 500ರ ನೋಟುಗಳನ್ನು ಎಸೆದು ಮಹಿಳೆ ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಹಳ ಹೊತ್ತು ನಡೆದ ಗಲಾಟೆಯಿಂದಾಗಿ ಜನಸಾಗರವೇ ಅಲ್ಲಿ ಜಮಾಯಿಸಿದ್ದು,ಟ್ರಾಫಿಕ್ ಜಾಮ್ ಉಂಟಾಯಿತು. ಇದನ್ನು ನೋಡಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು,ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೀಮಚ್ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಮಗ ತನಗೆ ಥಳಿಸುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಾನು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ. ನಾನು ಕ್ರಮಕ್ಕೆ ಒತ್ತಾಯಿಸಿದಾಗ ಪೊಲೀಸರು ಹಣ ಕೇಳುತ್ತಾರೆ, ಹಾಗಾಗಿ 500 ನೋಟುಗಳನ್ನು ತಂದು ಪೊಲೀಸ್ ಠಾಣೆಯ ಮುಂದೆ ಚೆಲ್ಲಾಪಿಲ್ಲಿ ಮಾಡಿದ್ದೆನೆ ಎಂದು ಮಹಿಳೆ ಹೇಳಿದ್ದಾರೆ.
ಪೊಲೀಸರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿ, ಪೊಲೀಸರಿಗೆ ಹಣ ಬೇಕು, ನಾನು ನೋಟುಗಳನ್ನು ಬೀಸಾಡಿದ್ದೇನೆ, ನಿಮಗೆ ಬೇಕಾದಷ್ಟು ತೆಗೆದುಕೊಳ್ಳಿ ಎಂದು ಕಿರುಚಾಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಂತಿ ಬಾಯಿ ಎಂಬ ಮಹಿಳೆ ಗುರುವಾರ (ಜೂನ್ 15) ರಾತ್ರಿ ಕೋಪದಿಂದ ಕ್ಯಾಂಟ್ ಪೊಲೀಸ್ ಠಾಣೆಗೆ ಬಂದಿದ್ದಳು. ಸ್ಕೂಟಿಯಲ್ಲಿ ಬಂದ ಮಹಿಳೆ ತನ್ನ ಜೊತೆಗೆ ಕೋಲು ತಂದಿದ್ದಳು. ಹಲ್ಲೆಯ ದೂರಿನ ಮೇರೆಗೆ ಕ್ರಮ ಕೈಗೊಳ್ಳಲು ಪೊಲೀಸರು ಲಂಚ ಕೇಳುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಸುಮಾರು 25 ಸಾವಿರದ 500-500 ನೋಟುಗಳನ್ನು ಗಾಳಿಯಲ್ಲಿ ಎಸೆದಿದ್ದಾಳೆ.