ಮಧ್ಯಪ್ರದೇಶ;ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದ
ಮದುವೆ ಸಮಾರಂಭದಲ್ಲಿ ಡಿಜೆ ಸಂಗೀತವನ್ನು ಜೋರಾಗಿ ಹಾಕಿದ್ದಕ್ಕೆ ಮುಸ್ಲಿಂ ಧರ್ಮಗುರುಗಳು ನಿಕಾಹ್ ಮಾಡುವುದಕ್ಕೆ ನಿರಾಕರಿಸಿರುವ ಘಟನೆ ನಡೆದಿದೆ.
ಕುಟುಂಬದವರು ಡಿಜೆ ಬಂದ್ ಮಾಡಿ ನಡವಳಿಕೆಗಾಗಿ ಕ್ಷಮೆಯಾಚಿಸಿದ ಬಳಿಕ ನಿಕಾಹ್ ನಡೆಸಲಾಗಿದೆ.
ಈ ಬಗ್ಗೆ ಧರ್ಮಗುರುವನ್ನು ಕೇಳಿದಾಗ, ನಮ್ಮ ಸಮಾಜದಲ್ಲಿ ಮದುವೆಯ ಸಮಯದಲ್ಲಿ ಡಿಜೆ ಸಂಗೀತ ಅಥವಾ ಜನರು ನೃತ್ಯ ಮಾಡುವುದಕ್ಕೆ ಅವಕಾಶ ಇಲ್ಲ. ಇದು ಅನಾವಶ್ಯಕ ವೆಚ್ಚವಾಗಿದೆ ಎಂದು ಹೇಳಿದ್ದಾರೆ.
ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶವನ್ನು ನೀಡಲು ಮುಸ್ಲಿಂ ಸಮಾಜದಲ್ಲಿ ಡಿಜೆ ಮತ್ತು ನೃತ್ಯ ಎರಡನ್ನೂ ನಿಷೇಧಿಸಲಾಗಿದೆ ಎಂದು ಇದೇ ವೇಳೆ ಧರ್ಮಗುರುಗಳು ಹೇಳಿದ್ದಾರೆ.