ನಿಜ್ಜರ್ ಸಲಿಂಗಕಾಮಿ( ಗೇ), ಕೆನಡಾ ಪ್ರಧಾನಿ ಅವನನ್ನು ಇಷ್ಟಪಡುತ್ತಿದ್ದರು!; ಬಿಜೆಪಿ ನಾಯಕನ‌ ಪೋಸ್ಟ್ ವೈರಲ್.‌

ನವದೆಹಲಿ; ಬಿಜೆಪಿಯ ಯುವ ಘಟಕ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಸೋಮವಾರ ಚರ್ಚಾಸ್ಪದ ಹೇಳಿಕೆ ನೀಡಿದ್ದು, ಹತ್ಯೆಯಾದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಸಲಿಂಗಕಾಮಿ(ಗೇ) ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಇಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ.

ಆದರೆ ನಿಜ್ಜರ್‌ ಇನ್ನೊಬ್ಬರಿಗಾಗಿ ಟ್ರುಡೋ ಅವರನ್ನು ದೂರ ಮಾಡಿದ್ದರು. ನಿಜ್ಜರ್ ಕೊಲೆಗೆ ಇದೇ ಕಾರಣವೇ ಎಂದು ಅವರು ‘ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ.

ನಿಜ್ಜರ್‌ ಅವರು ಕೆಲ ಪುರುಷರೊಂದಿಗೆ ಇರುವ ಚಿತ್ರಗಳನ್ನೂ ತೇಜಿಂದರ್ ಪಾಲ್ ಹಂಚಿಕೊಂಡಿದ್ದಾರೆ.

ನಿಜ್ಜರ್ ಕೊಲೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪಿಸಿದ್ದರಿಂದ ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿರುವಾಗಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಪ್ರಕರಣ ಸಂಬಂಧ ಸಾಕ್ಷ್ಯ ಒದಿಗಿಸುವಂತೆ ಕೆನಡಾವನ್ನು ಭಾರತ ಒತ್ತಾಯಿಸಿದೆ.ಉಭಯ ರಾಷ್ಟ್ರಗಳೂ ರಾಜತಾಂತ್ರಿಕವಾಗಿ ಪ್ರತಿಕಾರದ ಕ್ರಮಗಳನ್ನು ತೆಗೆದುಕೊಂಡಿವೆ.

ಪ್ರಕರಣದಲ್ಲಿ ಕೆನಡಾದ ತನಿಖೆಗೆ ಸಹಕರಿಸುವಂತೆ ಭಾರತಕ್ಕೆ ಅಮೆರಿಕಾ ಆಗ್ರಹಿಸಿದೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು