ನವದೆಹಲಿ;ಎನ್‌ಜಿಒಗಳು 2021-22ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 22 ಸಾವಿರ ಕೋಟಿ ಕೇವಲ ವಿದೇಶಗಳಿಂದಲೇ ಅನುದಾನ ಪಡೆದಿವೆ ಎನ್ನುವುದು ಇದೀಗ ಬಹಿರಂಗವಾಗಿದೆ.
Foreign Contribution Regulation Act ಅಡಿಯಲ್ಲಿ ಈ ಹಣ ಎನ್‌ಜಿಒಗಳ ಕೈ ಸೇರಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಪಡೆದ ಅನುದಾನಕ್ಕಿಂತ ಹೆಚ್ಚು ಇದೆ ಎಂದು ಸಂಸತ್‌ಗೆ ಭಾರತ ಸರ್ಕಾರ ಮಾಹಿತಿ ಕೊಟ್ಟಿದೆ.
2019-20ನೇ ಸಾಲಿನಲ್ಲಿ 16 ಸಾವಿರ ಕೋಟಿ ರೂಪಾಯಿ ಫಂಡ್, ಹಾಗೇ 2020-21 ನೇ ಸಾಲಿನಲ್ಲಿ 17ಸಾವಿರ ಕೋಟಿ ರೂಪಾಯಿ ಫಂಡ್ ಹರಿದು ಬಂದಿದೆ ಎಂದು ಸರ್ಕಾರ ಹೇಳಿದೆ.
ಬುಧವಾರ, ಗೃಹ ಸಚಿವಾಲಯವು ರಾಜ್ಯಸಭೆಯಲ್ಲಿ ಎರಡು ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರವಾಗಿ ಈ ಅಂಕಿ ಅಂಶಗಳನ್ನು ನಿಡೀದೆ.
2018 ಮತ್ತು 2022 ರ ನಡುವೆ ವಿದೇಶಿ ಕೊಡುಗೆಗಳ (ನಿಯಂತ್ರಣ) ಕಾಯಿದೆಯಡಿಯಲ್ಲಿ 1,827 NGO ಗಳ ನೋಂದಣಿಯನ್ನು ರದ್ದುಗೊಳಿಸಿದ್ದರೂ ಇಷ್ಟೊಂದು ಮೊತ್ತದ ಹಣ ಹರಿದು ಬಂದಿದೆ ಎಂದು ವರದಿ ತಿಳಿಸಿದೆ.
ದೇಶಾದ್ಯಂತ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) 2017-18 ಮತ್ತು 2021-22 ರ ನಡುವೆ 88,882 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕೊಡುಗೆಗಳನ್ನು ಸ್ವೀಕರಿಸಿವೆ. ವಿದೇಶಿ ದೇಣಿಗೆ (ನಿಯಂತ್ರಣ) ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಎನ್‌ಜಿಒಗಳ ಮೇಲೆ ಕ್ರಮ ಕೈಗೊಳಲಾಗಿದೆ ಎಂದು ಹೇಳಲಾಗಿದೆ.