ನೈಜೀರಿಯಾ;ನೈಜೀರಿಯಾದಲ್ಲಿ ಬಂದೂಕುಧಾರಿಗಳು ಮಸೀದಿಗೆ ನುಗ್ಗಿ ಇಮಾಮ್ ಸೇರಿದಂತೆ ಹನ್ನೆರಡು ಮಂದಿಯನ್ನು ಹತ್ಯೆ ಮಾಡಿ ಹಲವರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳಿರುವ ಬಗ್ಗೆ ರಾಯಿಟರ್ಸ್ ವರದಿ ಮಾಡಿದೆ.
ನೈಜೀರಿಯಾದ ವಾಯುವ್ಯದಲ್ಲಿರುವ ಮಸೀದಿಯೊಂದರ ಮೇಲೆ ದಾಳಿ ಮಾಡಿದ ನಂತರ ಬಂದೂಕುಧಾರಿಗಳು ದಾಳಿ ಮಾಡಿದ್ದಾರೆ. 19 ಜನರನ್ನು ಪ್ರಾರ್ಥನೆ ವೇಳೆ ಅಪಹರಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ದಾಳಿಕೋರರು ಪ್ರಾರ್ಥನೆಯ ಸಮಯದಲ್ಲಿ ಕಟ್ಸಿನಾ ರಾಜ್ಯದ ಮೈಗಮ್ಜಿ ಗ್ರಾಮದ ಮಸೀದಿಗೆ ನುಗ್ಗಿದರು ಮತ್ತು ಇಮಾಮ್ ಸೇರಿ ಹಲವರನ್ನು ಹತ್ಯೆ ಮಾಡಿ, ಇನ್ನು ಕೆಲವರನ್ನು ಅಪಹರಿಸಿದ್ದಾರೆ.
ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ತವರು ರಾಜ್ಯವಾದ ಕಟ್ಸಿನಾದಲ್ಲಿರುವ ಫಂಟುವಾ ನಿವಾಸಿ ಲಾವಲ್ ಹರುನಾ ರಾಯಿಟರ್ಸ್ಗೆ ಫೋನ್ ಮೂಲಕ ಘಟನೆ ಬಗ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಬಂದೂಕುಧಾರಿಗಳು ಮೋಟರ್ಬೈಕ್ಗಳಲ್ಲಿ ಮೈಗಮ್ಜಿ ಮಸೀದಿಗೆ ಆಗಮಿಸಿದರು ಮತ್ತು ಗುಂಡು ಹಾರಿಸಲು ಪ್ರಾರಂಭಿಸಿದರು.ರಾತ್ರಿ ಪ್ರಾರ್ಥನೆಗೆ ಹಾಜರಾಗುತ್ತಿದ್ದ ಸುಮಾರು 12 ಮಂದಿ ಗುಂಡೇಟಿಗೆ ಸಿಲುಕಿ ಮುಖ್ಯ ಇಮಾಮ್ ಸೇರಿದಂತೆ ಸಾವನ್ನಪ್ಪಿದ್ದಾರೆ ಎಂದು ಹರುನಾ ತಿಳಿಸಿದ್ದಾರೆ.
ಅವರು ನಂತರ ಅನೇಕ ಜನರನ್ನು ಅಪಹರಿಸಿ ಕರೆದುಕೊಂಡು ಹೋಗಿದ್ದಾರೆಂದು ಘಟನೆಯನ್ನು ಹರುನಾ ವಿವರಿಸಿದ್ದಾರೆ.