ಬಂಟ್ವಾಳ; ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಬಂಟ್ವಾಳ:ನೇತ್ರಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಂಚಿಕಾರ್ ಪೇಟೆಯ ಕೂಟೇಲು ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಬಗ್ಗೆ ವರದಿಯಾಗಿದೆ.

ಪುರಸಭಾ ಸದಸ್ಯ ಮೊಹಮ್ಮದ್ ಇಕ್ಬಾಲ್ ಅವರು ಬಂಟ್ವಾಳ ಪೇಟೆ ಕಡೆ ಹೋಗುವಾಗ ಕೂಟೇಲು ಸೇತುವೆ ಸಮೀಪದಲ್ಲಿ ಮಹಿಳೆಯ ಚಪ್ಪಲಿ ಕಂಡು ಬಂದಿದೆ. ಇದರಿಂದಾಗಿ ಅವರು ಸ್ವಲ್ಪ ಮುಂದಕ್ಕೆ ಹೋಗಿ ನೋಡಿದಾಗ ಮಹಿಳೆಯ ಮೃತದೇಹ ಕಂಡು ಬಂದಿದೆ.

ಕೂಡಲೇ ಅವರು ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಸ್ಥಳಕ್ಕೆ ಬಂದ ಪೊಲೀಸರು ಮೃತದೇಹ ಮೇಲಕ್ಕೆತ್ತಿದ್ದಾರೆ.

ಮೃತದೇಹ ಪತ್ತೆ ಬಳಿಕ ಅಪರಿಚಿತ ಮಹಿಳೆಯ ಬಗ್ಗೆ ಗುರುತು ಪತ್ತೆಗಾಗಿ ಪೋಲೀಸರು ಮನವಿ ಮಾಡಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

ಟಾಪ್ ನ್ಯೂಸ್