ಕೇರಳಕ್ಕೆ ಗೆಳೆಯನ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಸ್ನೇಹಿತರು ನೇಪಾಳ ವಿಮಾನ ದುರಂತದಲ್ಲಿ ಅಂತ್ಯ!

ನೇಪಾಳದ ಯೇತಿ ಏರ್ ಲೈನ್ಸ್ ನ ವಿಮಾನ ದುರಂತದಲ್ಲಿ ಕೇರಳದಲ್ಲಿ ಸ್ನೇಹಿತನ ಅಂತ್ಯಕ್ರಿಯೆಗೆ ಬಂದಿದ್ದ ಮೂವರು ಸ್ನೇಹಿತರು ಕೊನೆಯುಸಿರೆಳೆದಿದ್ದಾರೆ.

ಪೋಖರಾ ನಗರದಲ್ಲಿ ನಡೆದ ವಿಮಾನ ದುರಂತಕ್ಕೆ ಕೇರಳದ ಪಥನಂತಿಟ್ಟ ಜಿಲ್ಲೆಯ ಕುಟುಂಬವೂ ಆಘಾತಕ್ಕೊಳಗಾಗಿದೆ.

ವಿಮಾನ ದುರಂತದಲ್ಲಿ ಸಾವನ್ನಪ್ಪಿದ ರಾಜು, ರಾಬಿನ್ ಮತ್ತು ಅನಿಲ್ ತಮ್ಮ ಭಾರತೀಯ ಸಹೋದ್ಯೋಗಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಭಾನುವಾರ ಕೇರಳದಿಂದ ತೆರಳಿದ್ದರು.

ಪತ್ತನಂತಿಟ್ಟದ ಆನಿಕ್ಕಾಡು ನಿವಾಸಿ ಮ್ಯಾಥ್ಯೂ ಫಿಲಿಪ್ ಜನವರಿ 11 ರಂದು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾರತೀಯ ಮೂಲದ ಮೂವರು ಸ್ನೇಹಿತರು ಪಾಲ್ಗೊಂಡು ಬಳಿಕ ಅವರು ವಾಪಾಸ್ಸಾಗಿದ್ದರು. ಈ ವೇಳೆ ಅವಘಡ ನಡೆದಿದೆ.

ಟಾಪ್ ನ್ಯೂಸ್