ನೇಪಾಳ;ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಿಮಾನವೊಂದು ಭಾನುವಾರ ಪತನಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚಳವಾಗಿದೆ. ಕನಿಷ್ಠ 67 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ವಿಮಾನದಲ್ಲಿ ಇಬ್ಬರು ಶಿಶುಗಳು, ನಾಲ್ವರು ಸಿಬ್ಬಂದಿ ಮತ್ತು 10 ವಿದೇಶಿ ಪ್ರಜೆಗಳು ಸೇರಿದಂತೆ 72 ಜನರಿದ್ದರು ಎಂದು ವರದಿ ತಿಳಿಸಿದೆ.
ನೂರಾರು ರಕ್ಷಣಾ ಕಾರ್ಯಕರ್ತರು ಸ್ಥಳದಲ್ಲಿದ್ದಾರೆ.ಯೇತಿ ಏರ್ಲೈನ್ಸ್ ವಿಮಾನದಲ್ಲಿ ಐವರು ಭಾರತೀಯರು ಇದ್ದರು ಎಂದು ರಾಷ್ಟ್ರದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವೀಟ್ನಲ್ಲಿ ಖಚಿತಪಡಿಸಿದೆ.
15 ವಿದೇಶಿಯರು ಸೇರಿದಂತೆ 72 ಜನರನ್ನು ಹೊತ್ತೊಯ್ಯುತ್ತಿದ್ದ ನೇಪಾಳದ ಪ್ರಯಾಣಿಕ ವಿಮಾನವು ಪ್ರಮುಖ ಪ್ರವಾಸಿ ತಾಣವಾದ ಪೋಖರಾದ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ಕಮರಿಗೆ ಪತನಗೊಂಡಿದೆ.
ಯೇತಿ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಎಟಿಆರ್ 72 ವಿಮಾನವು ರಾಜಧಾನಿ ಕಠ್ಮಂಡುವಿನಿಂದ ಹೊರಟಿತ್ತು.