ನೇಜಾರು; ಕೊಲೆಗೀಡಾದ ತಾಯಿ ಮಕ್ಕಳ ಅಂತ್ಯಕ್ರಿಯೆ; ಶೋಕದಲ್ಲಿ ಮುಳುಗಿದ ಜನ

ಉಡುಪಿ: ನೇಜಾರು ತೃಪ್ತಿ ಲೇಔಟ್‌ನಲ್ಲಿ ಕೊಲೆಗೀಡಾದ ತಾಯಿ ಮತ್ತು ಮೂವರು ಮಕ್ಕಳ ಅಂತ್ಯಕ್ರಿಯೆಯು ಕೋಡಿಬೆಂಗ್ರೆ ಜುಮಾ ಮಸೀದಿಯಲ್ಲಿ ಇಂದು ಮಧ್ಯಾಹ್ನ ನೆರವೇರಿದೆ.

ಬೆಳಗ್ಗೆ 11ಗಂಟೆಯಿಂದ ತೃಪ್ತಿ ಲೇಔಟ್‌ನಲ್ಲಿರುವ ಮನೆಯ ಹೊರಗಡೆ ತಾಯಿ ಮತ್ತು ಮಕ್ಕಳ ಪ್ರಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸರ್ವಧರ್ಮೀಯರು ಅಂತಿಮ ದರ್ಶನ ಪಡೆದಿದ್ದಾರೆ.ಘಟನೆ ಕಂಡು ಇಡೀ ಪ್ರದೇಶವೇ ದುಃಖದಲ್ಲಿ ಮುಳುಗಿತ್ತು.

ಸೇರಿದ್ದ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ 12.15ರ ಸುಮಾರಿಗೆ ನಾಲ್ಕು ಪಾರ್ಥಿವ ಶರೀರಗಳನ್ನು ಕೋಡಿಬೆಂಗ್ರೆ ಮಸೀದಿಗೆ ಕೊಂಡೊಯ್ದು ಧಪನ ಕಾರ್ಯ ನಡೆಸಲಾಗಿದೆ.

ಟಾಪ್ ನ್ಯೂಸ್