ಬೆಂಗಳೂರು;ಜಿಮ್ ಹೋಗಿದ್ದ ವ್ಯಕ್ತಿಯನ್ನು ಮನೆಯೊಂದರಲ್ಲಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಲಿಯಾಖತ್ ಅಲಿಖಾನ್(39)ಕೊಲೆಯಾದ ವ್ಯಕ್ತಿ.ಇವರು ರಾತ್ರಿ ಜಿಮ್‌ಗೆ ಹೋಗುತ್ತೇನೆಂದು ಮನೆಯಿಂದ ಹೊರಗೆ ಹೋಗಿದ್ದರು.ಆದರೆ ಬಹಳ ಹೊತ್ತಾದರೂ ಮನೆಗೆ ವಾಪಸ್ ಬಂದಿರಲಿಲ್ಲ.ಕುಟುಂಬದವರು ಅನುಮಾನದಿಂದ ಹುಡುಕಾಟ ನಡೆಸಿದ್ದಾರೆ.ಆದರೆ ಬೆಳಗಿನ ಜಾವ ಅವರು ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಲಿಯಾಖತ್ ಅಲಿಖಾನ್ ನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಈತನ ಸ್ನೇಹಿತರಾದ ವಾಸಿಂ ಹಾಗೂ ಜೋಹರ್ ಎಂಬುವವರೇ ಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.