ಬೆಂಗಳೂರು; ಲಿಯಾಖತ್ ಕೊಲೆಯ ಹಿಂದೆ ಹೋಮೋ ಸೆಕ್ಸ್‌ ಸಂಬಂಧ ಕಾರಣ!; ನಾಯಂಡನಹಳ್ಳಿಯಲ್ಲಿ ನಡೆದ ಕೊಲೆಯ ಹಿಂದೆ…

ಬೆಂಗಳೂರು;ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿಯ ಮನೆಯೊಂದರಲ್ಲಿ ಲಿಯಾಖತ್ ಕೊಲೆಗೆ ಸಂಬಂಧಿಸಿ ಸ್ಪೋಟಕ ಟ್ವಿಸ್ಟ್ ಸಿಕ್ಕಿರುವ ಬಗ್ಗೆ ವರದಿಯಾಗಿದೆ.

ಫೆ.28ರಂದು ಲಿಯಾಖತ್ ಅಲಿಖಾನ್ (44) ರಾತ್ರಿ ಜಿಮ್‌ಗೆ ಹೋಗಿದ್ದವನು ನಾಪತ್ತೆಯಾಗಿದ್ದ, ಕುಟುಂಬಸ್ಥರಿಂದ ಹುಡುಕಾಟ ನಡೆಸಿದಾಗ ಬೆಳಗಿನ ಜಾವ ಮತ್ತೊಂದು ಮನೆಯಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿತ್ತು.

ಚಂದ್ರಾ ಲೇಔಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ, ಕಳೆದ ಎರಡು ವರ್ಷಗಳಿಂದ ಆರೋಪಿ ಇಲಿಯಾಸ್ ಜೊತೆಗೆ ಲಿಯಾಖತ್‌ ಅಲಿಖಾನ್‌ ಹೋಮೋ ಸೆಕ್ಸ್‌ ಸಂಬಂಧದಲ್ಲಿದ್ದ ಎನ್ನುವುದು ಬಹಿರಂಗವಾಗಿರುವ ಬಗ್ಗೆ ವರದಿಯಾಗಿದೆ.

ಕೊಲೆಯಾದ ಎರಡು ದಿನಗಳ ಹಿಂದಷ್ಟೇ ಲಿಯಾಖತ್‌ ಎರಡನೇ ಮದುವೆಯಾಗಿದ್ದ. ಆದರೆ, ಲಿಯಾಖತ್‌ ಜತೆ ಹೋಮೋ ಸೆಕ್ಸ್‌ನಲ್ಲಿದ್ದ ಕಾರಣದಿಂದಾಗಿ ಇಲಿಯಾಸ್‌ ತನ್ನ ಎಂಗೇಜ್‌ಮೆಂಟ್ ನ್ನು ಕ್ಯಾನ್ಸಲ್‌ ಮಾಡಿಕೊಂಡಿದ್ದ.

ತಮ್ಮ ಭವಿಷ್ಯದ ಬಗ್ಗೆ ಇಲಿಯಾಸ್ ಹಾಗೂ ಲಿಯಾಖತ್ ನಡುವೆ ಜಗಳವಾಗಿದೆ.ಬಳಿಕ ಇಲಿಯಾಸ್ ಲಿಯಾಖತ್‌
ಗೆ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಕೊಲೆ ಬಳಿಕ ಇಲ್ಯಾಸ್ ಥೈರಾಯಿಡ್ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಕೂಡ ಯತ್ನಿಸಿದ್ದ.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com