ಕರ್ನಾಟದಿಂದ ಡೆಲ್ಲಿಗೆ ಅಮಿತ್ ಶಾ ಮನೆಮುಂದೆ ಪ್ರತಿಭಟನೆಗೆ ತೆರಳಿದ ಯುವತಿ; ಪೊಲೀಸರಿಂದ‌ ತಡೆ

ನವದೆಹಲಿ; ನಾವು ಅಮಿತ್ ಶಾ ಮನೆಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹೋಗಿದ್ದೆವು ಆದರೆ ಅನಮತಿ ನೀಡಿಲ್ಲ ಎಂದು ಚನ್ನಪಟ್ಟಣ ಮೂಲದ ನವ್ಯಶ್ರೀ ರಾವ್ ಹೇಳಿದ್ದಾರೆ.

ಅಮಿತ್​ ಶಾ ಅವರು ಮನೆಯಲ್ಲಿದ್ದರೂ ನಮಗೆ ಭೇಟಿಗೆ ಅವಕಾಶ ಸಿಗಲಿಲ್ಲ.ಅಮಿತ್​ ಶಾ ಅವರ ಮನೆ ಬಳಿ ಹೋದಾಗ ನಮ್ಮನ್ನು ಥಾಣಾ ಪೊಲೀಸ್​ ಠಾಣೆಗೆ ಕರೆದೊಯ್ದರು. ನಮ್ಮ ಪ್ರತಿಭಟನೆಗೆ ತಡೆಯೊಡ್ಡಿದ್ದಾರೆ ಎಂದು ಹೇಳಿದ್ದಾರೆ.

ಆ.15 ರಂದು ಕೂಡ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಹೋಗುವಾಗಲೂ ನಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಕರ್ನಾಟಕದಲ್ಲಿ ಆಗಿತ್ತು ಎಂದು ಹೇಳಿದ್ದಾರೆ.

ನಾನು ಎಫ್​ಐಆರ್ ಪ್ರತಿ ಕೊಟ್ಟು ನನಗೆ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದ್ದೆ.ಪೊಲೀಸ್ ಇಲಾಖೆ ಪ್ರಕರಣದ ದಿಕ್ಕು ತಪ್ಪಿಸುತ್ತಿದೆ. ರಾಜಕುಮಾರ್ ಟಾಕಳೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿಯನ್ನು ಬಂಧಿಸಿಲ್ಲ ಎಂದು ಇದೇ ವೇಳೆ ವಿವರಿಸಿದರು.

ರಾಜಕುಮಾರ್​ ಟಾಕಳೆ ಒಬ್ಬ ಅತ್ಯಾಚಾರ ಮಾಡಿದ್ದಾನೆ. ನನ್ನ ಖಾಸಗಿ ವಿಡಿಯೋ ಹರಿಯಬಿಟ್ಟು ಮಾನಹಾನಿ ಮಾಡಿದ್ದಾನೆ. ಆದರೂ ಈತನನ್ನು ಬಂಧಿಸಿಲ್ಲ. ಇನ್ನು ನಟೋರಿಯಸ್​, ಟೆರರಿಸ್ಟ್​ಗಳನ್ನು ಹೇಗೆ ಬಂಧಿಸ್ತಾರೆ? ಎಂದು ಪೊಲೀಸ್​ ಇಲಾಖೆ ವಿರುದ್ಧ ನವ್ಯಶ್ರಿ ಇದೇ ವೇಳೆ ಆಕ್ರೋಶ ಹೊರ ಹಾಕಿದ್ದಾರೆ.

ಟಾಪ್ ನ್ಯೂಸ್