ಉಳ್ಳಾಲ; ಯುವಕನೋರ್ವ ಜ್ವರದಿಂದ ಮೃತ್ಯು

ಮಂಗಳೂರು: ಯುವಕನೋರ್ವ ಜ್ವರದಿಂದ ಮೃತಪಟ್ಟ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲದ ನ್ಯೂಪಡ್ಪು ನಿವಾಸಿ ಸದ್ಯ ನಾಟೆಕಲ್‌ ನಲ್ಲಿ ನೆಲೆಸಿದ್ದ ನವಾಝ್‌(32)ಮೃತ ಯುವಕ. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನವಾಝ್‌ ಗುರುವಾರ ಜ್ವರ ತೀವ್ರವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

ಇವರು ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಜಿ ಎಲ್‌ ಜಿ ಫಿಶರೀಸ್‌ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.

ಟಾಪ್ ನ್ಯೂಸ್