ಬೆಂಗಳೂರು;2008ರ ಬೆಂಗಳೂರು ಸ್ಫೋಟದ ಪ್ರಕರಣದಲ್ಲಿ ಬಂಧಿತ ಪಿಡಿಪಿ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸಿರ್ ಮದನಿ
ಕೋರ್ಟ್ ಅನುಮತಿ ಮೇರೆಗೆ ಬೆಂಗಳೂರು ಜೈಲಿನಿಂದ ಕೇರಳದ ಮನೆಗೆ ತೆರಳಿದ್ದಾರೆ.
ಬೆಂಗಳೂರು ಜೈಲಿನಲ್ಲಿದ್ದ ಮದನಿ ಸೋಮವಾರ ಸಂಜೆ 6.15ರ ವಿಮಾನದಲ್ಲಿ ಕೊಚ್ಚಿನ್‌ಗೆ ಪ್ರಯಾಣ ಬೆಳೆಸಿದ್ದು, ಈ ವೇಳೆ ಮದನಿಯ ಪತ್ನಿ ಮತ್ತು ಇತರರು ಆಗಮಿಸಿದ್ದರು.
ಮದನಿಯನ್ನು ಕೇರಳದ ಮನೆಗೆ ಕರೆದೊಯ್ಯಲಾಗುತ್ತಿದ್ದು, ಭದ್ರತೆಗೆ ಒಬ್ಬ ಎಸ್‌ಐ, ಮೂವರು ಕಾನ್‌ಸ್ಟೇಬಲ್‌ಗಳ ನಿಯೋಜನೆ ಮಾಡಲಾಗಿದೆ.
ಮದನಿ 2008ರ ಜುಲೈ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಪಕ್ಕದಲ್ಲಿ ಒಂಬತ್ತು ಕಡಿಮೆ ತೀವ್ರತೆಯ ಬಾಂಬ್‌ಗಳು ಸ್ಫೋಟಿಸಿದ್ದವು. ಇದರಲ್ಲಿ ಒಬ್ಬ ಸಾವನ್ನಪ್ಪಿದ್ದು, 9 ಮಂದಿಗೆ ಗಾಯಗಳಾಗಿತ್ತು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸಿದ್ದರು.
57 ವರ್ಷದ ಮದನಿ ದೀರ್ಘ ಕಾಲದಿಂದ ಜೈಲಿನಲ್ಲಿದ್ದು, ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಅದರ ಜತೆಗೆ ತಂದೆಯ ಆರೋಗ್ಯವೂ ಹದಗೆಟ್ಟಿದೆ. ಹೀಗಾಗಿ ಕೇರಳದಲ್ಲಿರುವ ಮನೆಗೆ ಹೋಗಿ ತಂದೆಯವರನ್ನು ನೋಡಿಕೊಂಡು ಬರುತ್ತೇನೆ, ಜತೆಗೆ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದು ಬರುತ್ತೇನೆ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿತ್ತು.
ಮದನಿ ಮತ್ತು ತಂದೆಯ ಆರೋಗ್ಯ ಸ್ಥಿತಿಗಳೆರಡರ ಬಗ್ಗೆಯೂ ವೈದ್ಯಕೀಯ ವರದಿಗಳನ್ನು ಪಡೆದ ಸು.ಕೋರ್ಟ್ ಜೂನ್ 26ರಿಂದ ಜುಲೈ 07ರವರೆಗೆ 12 ದಿನ ಕೇರಳದ ಮನೆಯಲ್ಲಿರಲು ಕೋರ್ಟ್ ಅವಕಾಶ ನೀಡಿದೆ.ಇದರ ಜೊತೆಗೆ ಪ್ರಯಾಣದ ಸಂಪೂರ್ಣ ವೆಚ್ಚ ಭರಿಸುವಂತೆ ಸೂಚಿಸಲಾಗಿದೆ.