ವಿಟ್ಲ;ಮಿತ್ತೂರಿನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ಒಂದು ಸಮುದಾಯದ ವಿರುದ್ಧ ಪ್ರಚೋದನಾಕಾರಿ ಹಾಗು ಶಾಂತಿಗೆ ಧಕ್ಕೆ ತರುವ ಭಾಷಣ ಮಾಡಿದ ನರಸಿಂಹ ಮಾಣಿ ಹಾಗೂ
ಕಾರ್ಯಕ್ರಮ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಟ್ಲ ಪೊಲೀಸರಿಗೆ ಸ್ಥಳೀಯ ಪಾಟ್ರಕೋಡಿ ನಾಗರಿಕರು ದೂರು ನೀಡಿದ್ದಾರೆ.
ನರಸಿಂಹ ತನ್ನ ಭಾಷಣದಲ್ಲಿ ಪಾಟ್ರಕೋಡಿ ನಿವಾಸಿಗಳು ದೇಶದ್ರೋಹಿಗಳು, ದನಕಳ್ಳರು, ಪಾಟ್ರಕೋಡಿ ಮಿನಿ ಪಾಕಿಸ್ತಾನ ಎಂದು ಭಾಷಣ ಮಾಡಿ ಶಾಂತಿಯಿಂದ ಜನ ಜೀವನ ನಡೆಸುವ ಪಾಟ್ರಕೋಡಿಯಲ್ಲಿ ಜನರನ್ನು ಎತ್ತಿಕಟ್ಟಿ ಅಶಾಂತಿಗೆ ಪ್ರಚೋದಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನರಸಿಂಹ ಹಾಗೂ ಕಾರ್ಯಕ್ರಮದ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಆಗ್ರಹಿಸಲಾಗಿದೆ.