ಉತ್ತರಪ್ರದೇಶ;ಮುಜಾಫರ್ ನಗರ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಇತರ ಸಹಪಾಠಿಗಳಿಗೆ ಸೂಚಿಸಿದ ಶಿಕ್ಷಕಿಯ ವಿಡಿಯೋ ದೇಶದಲ್ಲಿ ಸಂಚಲನ ಮೂಡಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯಿತ್ ಮಧ್ಯಪ್ರವೇಶಿಸಿದ್ದು, ಘಟನೆ ನಡೆದ ಖುಬ್ಬಾಪುರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರನ್ನು ಭೇಟಿ ಮಾಡಿದರು.
ಘಟನೆಯಿಂದ ಪರಸ್ಪರ ಪ್ರೀತಿಯ ವಾತಾವರಣ ಕೆಡವಲು ಬಿಡುವುದಿಲ್ಲ. ಆರೋಪಿ ಶಿಕ್ಷಕಿ ಮತ್ತು ಶಾಲೆಯ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ ಕೋಮಾದಲ್ಲಿದೆ. ಇಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದ್ದಾರೆ.
ಕಪಾಳಮೋಕ್ಷ ಮಾಡಿದ್ದ ವಿದ್ಯಾರ್ಥಿ ಮತ್ತು ಮುಸ್ಲಿಂ ವಿದ್ಯಾರ್ಥಿಯನ್ನು ಅವರು ಪರಸ್ಪರ ಆಲಿಂಗಿಸುವಂತೆ ಸೂಚಿಸಿದರು. ಆ ಮೂಲಕ ಗ್ರಾಮದ ಜನರಲ್ಲಿ ಮನಸ್ತಾಪ ಮುಂದುವರೆಯದಂತೆ ನರೇಶ್ ಟೀಕಾಯತ್ ಶ್ರಮಿಸಿದ್ದಾರೆ.
ಮಕ್ಕಳಿಬ್ಬರು ಅಪ್ಪಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.