ಶಾಲೆಯಲ್ಲಿ ನಮಾಝ್ ಮಾಡುವಂತೆ ವಿದ್ಯಾರ್ಥಿಗಳಿಗೆ ಬಲವಂತ ಆರೋಪ; ಪ್ರಾಂಶುಪಾಲರ ಅಮಾನತು, ತನಿಖೆಗೆ ಆದೇಶ
ಲಕ್ನೋ;ಹತ್ರಾಸ್‌ನಲ್ಲಿರುವ ಖಾಸಗಿ ಶಾಲೆಯ ಪ್ರಾಂಶುಪಾಲರಾದ ಸೋನಿಯಾ ಮೆಕ್‌ಫರ್ಸನ್ ಅವರನ್ನು ವಿದ್ಯಾರ್ಥಿಗಳಿಗೆ ನಮಾಜ್ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ ಒಂದು ದಿನದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.
ಹಿಂದೂ ಮುಖಂಡ ದೀಪಕ್ ಶರ್ಮಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆದರೆ, ಶಾಲೆಯ ಆಡಳಿತ ಮಂಡಳಿ ಆರೋಪವನ್ನು ತಳ್ಳಿಹಾಕಿದೆ.
ಹತ್ರಾಸ್‌ನ ಎಸ್‌ಡಿಎಂ ಅಶುತೋಷ್ ಕುಮಾರ್ ಅವರು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿದ್ದಾರೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ತನಿಖೆಗೆ ಸಮಿತಿಯನ್ನು ಹತ್ರಾಸ್ ಜಿಲ್ಲೆಯ ಉಪ ಜಿಲ್ಲಾಧಿಕಾರಿ ರೂಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ಐದು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
BLS ಇಂಟರ್‌ನ್ಯಾಷನಲ್ ಸ್ಕೂಲ್‌ನ ಹೊರಗೆ ಪೋಷಕರು ಮತ್ತು ಬಲಪಂಥೀಯ ಮುಖಂಡರ ಗುಂಪು ಬುಧವಾರ ಪ್ರತಿಭಟನೆಗಳನ್ನು ಆಯೋಜಿಸಿತ್ತು.ಶಾಲಾ ಆವರಣದಲ್ಲಿ ನಮಾಝ್ ಮಾಡಲು ಮತ್ತು ಬುರ್ಖಾ ಧರಿಸುವಂತೆ ಶಿಕ್ಷಕರು ಮತ್ತು ಪ್ರಾಂಶುಪಾಲರು ಒತ್ತಾಯಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆಡಳಿತ ಮಂಡಳಿಯು ಪ್ರಾಂಶುಪಾಲರಾದ ಸೋನಿಯಾ ಮ್ಯಾಕ್‌ಫರ್ಸನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಿದೆ. ಶಾಲೆಯ ಆಂತರಿಕ ಸಮಿತಿ ಮತ್ತು ಆಡಳಿತ ಸಮಿತಿಯನ್ನು ರಚಿಸಲಾಗಿದೆ.