ನಮಕ್ಕಲ್: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ಕೊಂದು ಮೋಟಾರ್ ಪಂಪ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ತಡರಾತ್ರಿ ತಮಿಳುನಾಡು ನಾಮಕ್ಕಲ್ ಜಿಲ್ಲೆಯ ಮೋಹನೂರಿನಲ್ಲಿ ನಡೆದಿದೆ.
ಗುಣವತಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮಕ್ಕಳಾದ ಪ್ರಿಯಾನ್ (5) ಸುಜಿತ್ಪ್ರಿಯನ್ (2) ಕೂಡಾ ಸಾವಿಗೀಡಾಗಿದ್ದಾರೆ.
ನಾಮಕ್ಕಲ್ ವಿಭಾಗದ ಡಿಎಸ್ಪಿ ಎಸ್ ಸುರೇಶ್ ಮಾತನಾಡಿ, ಗುಣವತಿ ಅವರು 2017 ರಲ್ಲಿ ಗೋಪಿ ಅವರನ್ನು ವಿವಾಹವಾಗಿದ್ದರು. ಕೆಲವು ತಿಂಗಳ ಹಿಂದೆ ಕೌಟುಂಬಿಕ ಕಲಹದ ನಂತರ ಪ್ರಸ್ತುತ ಅವರು ತಮ್ಮ ತಂದೆ ಬಿ ಕೇಶವನ್ (70) ಅವರೊಂದಿಗೆ ವಾಸಿಸುತ್ತಿದ್ದರು ಎಂದು ಅವರು ಹೇಳಿದರು.
ಸೋಮವಾರ ರಾತ್ರಿ 10.30ರ ಸುಮಾರಿಗೆ ತನ್ನ ಮಕ್ಕಳಿಗೆ ಆಹಾರ ಸೇವಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ಥಳಿಸುತ್ತಿದ್ದಳು.ಇದನ್ನು ಕಣ್ಣಾರೆ ಕಂಡ ಕೇಶವನ್, ಮಕ್ಕಳನ್ನು ಥಳಿಸಿದ್ದಕ್ಕೆ ಆಕೆಯನ್ನು ನಿಂದಿಸಿದ್ದಾನೆ.
ಇದರಿಂದ ಮನನೊಂದ ಆಕೆ ಮಕ್ಕಳೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಳೆ. “ಅವಳು ತನ್ನ ಮಕ್ಕಳನ್ನು ಮುರುಗನ್ ದೇವಸ್ಥಾನದ ಬಳಿಯ ಬಾವಿಗೆ ಎಸೆದು ಮೋಟಾರ್ ಪಂಪ್ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರು ಹೇಳಿದರು, ಕೆಲವೇ ಗಂಟೆಗಳ ನಂತರ ಸಾವಿನ ಬಗ್ಗೆ ತಿಳಿದ ಕೇಶವನ್ ಭಯಗೊಂಡು ನಿದ್ರೆ ಮಾತ್ರೆಗಳನ್ನು ಸೇವಿಸಿದರು ಮತ್ತು ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.ಬಳಿಕ ಸ್ಥಳೀಯರು ಬಂದು ಅವರನ್ನು ರಕ್ಷಿಸಿದ್ದಾರೆ