ಬೆಂಗಳೂರು; ಸೈಟ್ ಹೆಸರಲ್ಲಿ ವಂಚನೆ ನಡೆಸಿದ ಜಯಕುಮಾರ್ ಬಿಜೆಪಿ ಅಧ್ಯಕ್ಷರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾನೆ ಎಂದು ಕಾಂಗ್ರಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಆರೋಪಿ ಜಯಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ.
ನಳಿನ್ ಕಟೀಲ್ ಅವರೇ,ಈತನ ವಂಚನೆಯಲ್ಲಿ ನಿಮ್ಮದೂ ಪಾಲಿದೆಯೇ?ಈತನ ವಂಚನೆಗೆ ನಿಮ್ಮ ಶ್ರೀರಕ್ಷೆ ಇದೆಯೇ?
ಈ ವಂಚಕನಿಗೆ ಬಿಜೆಪಿ ನಾಯಕರ ರಕ್ಷಣೆ ಇರುವಾಗ ಲಕ್ಷಾಂತರ ರೂಪಾಯಿ ಕಳೆದುಕೊಂಡ ಜನರಿಗೆ ನ್ಯಾಯ ಸಿಗಲು ಸಾಧ್ಯವೇ? ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದೆ.
ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸೈಟ್ ಕೊಡಿಸುವ ಹೆಸರಿನಲ್ಲಿ
ಜಯಕುಮಾರ್ ವಂಚನೆ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಸೈಟ್ ಗಾಗಿ ಹುಡುಕಾಟ ನಡೆಸುವವರ ಖಾಸಗಿ ಡೇಟಾ ಕಳ್ಳದಾರಿಯ ಮೂಲಕ ಪಡೆದುಕೊಳ್ಳುವ ಜಯಕುಮಾರ್, ತಮ್ಮ ಎಜೆಂಟ್ ಗಳ ಮುಖಾಂತರ ಕರೆ ಮಾಡಿಸಿ, ಕೂಡಲೇ ಅಡ್ವಾನ್ಸ್ ಕೊಟ್ಟು ಸೈಟ್ ಬುಕ್ ಮಾಡುವಂತೆ ಒತ್ತಡ ಹಾಕಿಸುತ್ತಾನೆ ಎನ್ನಲಾಗಿದೆ.
25-30 ಲಕ್ಷ ಬೆಲೆಯುಳ್ಳ ಸೈಟನ್ನು, 10 ರಿಂದ 12 ಲಕ್ಷಕ್ಕೆ ಕೊಡೊದಾಗಿ ಹೇಳಿ 5 ಲಕ್ಷ ಅಡ್ವಾನ್ಸ್ ಪಡೆದುಕೊಳ್ಳುತ್ತಾರೆ. ಇದೇ ಥರಾ ಒಂದೇ ಸೈಟಿನ ಕ್ರಯ ಪತ್ರವನ್ನು 10-15 ಜನರಿಗೆ ಮಾರಾಟ ಮಾಡಿ ನಂತರ ಹಣ ವಾಪಾಸ್ ನೀಡದೆ ರಾಜಕೀಯ ಪ್ರಭಾವ ಬಳಸಿ ಹೆದರಿಸುತ್ತಾರೆ ಎಂದು ಗ್ರಾಹಕರು ಆರೋಪ ಮಾಡಿದ್ದಾರೆ.ಇದೇ ರೀತಿ ಈತ ಕೋಟ್ಯಾಂತರ ಹಣ ಸಾಮಾನ್ಯ ಜನರಿಂದ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.