ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣದ ವೇಳೆ ಮಹಿಳೆಯೋರ್ವರು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯ ಬ್ಯಾಡಗಿಯಲ್ಲಿ ಬಿಜೆಪಿಯಿಂದ ಆಯೋಜನೆ ಮಾಡಲಾಗಿದ್ದ ಎಸ್‌ಟಿ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣದ ವೇಳೆ ಸಿಟ್ಟಿಗೆದ್ದ ಮಹಿಳಾ ಕಾರ್ಯಕರ್ತೆ ಕುರ್ಚಿಯಿಂದ ಎದ್ದು ಸಿಲಿಂಡರ್ ಗೆ ಇಷ್ಟೊಂದು ರೆಟ್ ಮಾಡಿದ್ದೀರಾ? ಮತ್ತೆ ಕುಕ್ಕರಲ್ಲೆ ಅಡುಗೆ ಮಾಡಿಕೊಂಡು ತಿನ್ನಿ ಅಂತಾರೆ?ನಿಮಗೆ ದುಡ್ಡಿದೆ ನಿಮ್ಮ ಮನೆಯ ಹೆಣ್ಮಕ್ಕಳಿಗೆ ತೊಂದ್ರೆ ಇಲ್ಲ. ನಾವು ಎಲ್ಲೆಂದ ರೊಕ್ಕ ತರೋಣಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾಷಣದ ಮಧ್ಯೆಯೇ ಕುರ್ಚಿಯಿಂದ ಮೇಲೆದ್ದ ಮಹಿಳೆ ಒಂದು ಸಿಲಿಂಡರ್ ಗೆ 1,300 ರೂಪಾಯಿ ರೊಕ್ಕ ಮಾಡಿದ್ದೀರಿ, ಬಡವರು ಎಲ್ಲಿ ಹೋಗಬೇಕು? ಯಾಕೆ 1,500 ರುಪಾಯಿ ಮಾಡಿಬಿಡಿ ಎಂದು ಹೇಳಿದ್ದಾರೆ.