ಬೋರ್ಡ್ ಪರೀಕ್ಷೆ ಬರೆಯಲು ನಳಂದಾ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಯುವಕ ಕೊಠಡಿಯಲ್ಲಿ ಬರೋಬ್ಬರಿ 500 ಜನ ಹೆಣ್ಣು ಮಕ್ಕಳು ಪರೀಕ್ಷೆ ಬರೆಯುವುದನ್ನು ಕಂಡು ಮೂರ್ಛೆ ಹೋಗಿದ್ದಾನೆ!
ಬಿಹಾರ;ವಿಚಿತ್ರ ಪ್ರಕರಣವೊಂದು ನಡೆದಿದ್ದು, ಬೋರ್ಡ್ ಪರೀಕ್ಷೆ ಬರೆಯಲು ನಳಂದಾ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಯುವಕ ಕೊಠಡಿಯಲ್ಲಿ ಬರೋಬ್ಬರಿ 500 ಜನ ಹೆಣ್ಣು ಮಕ್ಕಳು ಪರೀಕ್ಷೆ ಬರೆಯುವುದನ್ನು ಕಂಡು ಮೂರ್ಛೆ ಹೋಗಿದ್ದಾನೆ ಎಂದು ವರದಿ ತಿಳಿಸಿದೆ.
17 ವರ್ಷದ ಮನೀಶ್ ಶಂಕರ್ ಪ್ರಸಾದ್, ಸುಂದರ್‌ಗಢ್‌ನ ಬ್ರಿಲಿಯಂಟ್ ಕನ್ವೆನ್ಷನ್ ಸ್ಕೂಲ್‌ನಲ್ಲಿ ಬುಧವಾರ ಗಣಿತ ಪರೀಕ್ಷೆ ಬರೆಯುತ್ತಿದ್ದಾಗ 500 ಜನರಿಂದ ಸುತ್ತುವರಿದಿದ್ದ. ಆತನಿಗೆ ಭಯ ಆಗಿದೆ.
ಆತ ಪರೀಕ್ಷಾ ಕೇಂದ್ರದಲ್ಲಿ ಸುಮಾರು 500 ಹುಡುಗಿಯರ ನಡುವೆ ಏಕಾಂಗಿಯಾಗಿ ಪರೀಕ್ಷೆ ಬರೆಯುತ್ತಿದ್ದ. ಇದರಿಂದಾಗಿ ಆತ ಮೂರ್ಛೆ ತಪ್ಪಿದ್ದು ಜ್ವರಕ್ಕೆ ತುತ್ತಾಗಿದ್ದಾನೆ ಎಂದು ಪ್ರಸಾದನ ಚಿಕ್ಕಮ್ಮ ಹೇಳಿದ್ದಾರೆ.
ಈತನನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಸದರ್ ಆಸ್ಪತ್ರೆಗೆ ಕರೆತರಲಾಗಿದೆ.