ನಾಗ್ಪುರ ವಿವಿ ಎಂಎ ನಾಲ್ಕನೇ ಸೆಮಿಸ್ಟರ್ ಪಠ್ಯಪುಸ್ತಕದಲ್ಲಿ ಬಿಜೆಪಿಯ ಇತಿಹಾಸ ಮತ್ತು ರಾಮಜನ್ಮ ಭೂಮಿ ವಿವಾದದ ಕುರಿತು ಪಠ್ಯವನ್ನು ಸೇರ್ಪಡೆ ಮಾಡಲು ಮುಂದಾಗಿದೆ.
ಕಮ್ಯುನಿಸ್ಟ್ ಪಕ್ಷದ ಇತಿಹಾಸವನ್ನು ರಾಷ್ಟ್ರೀಯ ಪಕ್ಷದಿಂದ ತೆಗೆದು ಹಾಕಿ ಬಿಜೆಪಿಯ ಇತಿಹಾಸವನ್ನು ಸೇರಿಸಲಾಗುತ್ತಿದೆ.
ನಾಗಪುರದ ರಾಷ್ಟ್ರಸಂತ್ ತುಕ್ಡೋಜಿ ಮಹಾರಾಜ್ ವಿಶ್ವವಿದ್ಯಾನಿಲಯದಲ್ಲಿ ನಾಲ್ಕನೇ ಸೆಮಿಸ್ಟರ್ MAನಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಜನತಾ ಪಕ್ಷ ಮತ್ತು ರಾಮ ಜನ್ಮಭೂಮಿ ಕುರಿತ ಪಠ್ಯವನ್ನು ಇತಿಹಾಸ ಪಾಠಪುಸ್ತಕದಲ್ಲಿ ಸೇರಿಸಲಾಗುವುದು ಎಂದು ವಿವಿಯ ಇತಿಹಾಸ ವಿಭಾಗ ಹೇಳಿದೆ. ಈ ಕುರಿತ ಪ್ರಸ್ತಾವನೆಗೆ ನಾಗಪುರ ವಿವಿ ಇತಿಹಾಸ ವಿಭಾಗ ಸಮ್ಮತಿಯನ್ನು ನೀಡಿದೆ.
ಹೊಸ ಪಠ್ಯದಲ್ಲಿ ಜನಸಂಘ, ಭಾರತೀಯ ಜನತಾ ಪಕ್ಷದ ಕೆಲಸ ಏನು? ಪಕ್ಷವನ್ನು ಹೇಗೆ ರಚಿಸಲಾಯಿತು? ಅದು ಹೇಗೆ ಸ್ಥಿರ ಸರ್ಕಾರವನ್ನು ನೀಡಿದೆ ಇತ್ಯಾದಿಗಳನ್ನು ಬೋಧಿಸಲಾಗುತ್ತಿದೆ.ಈ ಕೋರ್ಸ್‌ನ್ನು ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿ ಇರಿಸಲಾಗಿದೆ.