ಪ್ರೀತಿಸಿ ಕೈಕೊಟ್ಟ ಯುವಕ; ಕಾಲೇಜು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಮೈಸೂರು;ಯುವತಿಯೋರ್ವಳು ತಾನು ಪ್ರೀತಿ ಮಾಡಿದ ಯುವಕ ಕೈಕೊಟ್ಟಿದ್ದಕ್ಕೆ ಮನನೊಂದು ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದ ದುರ್ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದ ಯುವತಿ ನಿಸರ್ಗ(20) ಮೃತಪಟ್ಟಿದ್ದಾರೆ.

ಪ್ರೀತಿಸಿದ ಹುಡುಗ ಮತ್ತೊಬ್ಬಳ ಹಿಂದೆ ಸುತ್ತಾಡಿದ ಹಿನ್ನಲೆಯಲ್ಲಿ ಡೆತ್ ನೋಟ್ ಬತೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು ಇಲಿ ಪಾಷಾಣ ತಿಂದ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ.

ಮೃತ ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು.ಕಾಲೇಜಿನಲ್ಲಿ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು.ಸುಹಾಸ್ ರೆಡ್ಡಿ ಹಲವು ವರ್ಷ ಆಕೆಗೆ ಪ್ರೀತಿಸಿ, ಆಕೆಯ ಜೊತೆ ಸುತ್ತಾಡಿ ಈಗ ಬೇರೆ ಯುವತಿ ಜೊತೆ ಸುತ್ತಾಟ ಶುರು ಮಾಡಿದ್ದಾನೆ.

ಇದರಿಂದ ಮಾನಸಿಕವಾಗಿ ಕಿನ್ನತೆಗೆ ಒಳಗಾಗಿದ್ದ ನಿಸರ್ಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆತ್ಮಹತ್ಯೆ ಘಟನೆ ಕುರಿತು ಕೆ.ಆರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಆಗಿದೆ.ಪ್ರೀತಿಸಿದ ಯುವಕ ಸುಹಾಸ್ ರೆಡ್ಡಿ ಸೇರಿ‌ ಐವರ ಮೇಲೆ ಕೇಸ್ ದಾಖಲಾಗಿದೆ.

ಟಾಪ್ ನ್ಯೂಸ್