ಮೈಸೂರು:ತಾಯಿ-ಮಗ ಇಬ್ಬರೂ ಹೃದಯಾಘಾತದಿಂದ ಮೃತಪಟ್ಟ ಘಟನೆ,ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆ ಬಳಿ ನಡೆದಿದೆ.
ಸಣ್ಣಮಂಚಮ್ಮ(58),ಇವರ ಪುತ್ರ ಕೃಷ್ಣ(45)ಮೃತರು.
ಪಟ್ಟಣದ ಸೇಂಟ್ ಮೇರಿಸ್ ಆಸ್ಪತ್ರೆ ಬಳಿ ಕೃಷ್ಣ ಅವರು ಟೀ ಅಂಗಡಿ ನಡೆಸುತ್ತಿದ್ದರು.ಕೃಷ್ಣ ಅವರ ತಾಯಿ ಸಣ್ಣಮಂಚಮ್ಮ ಭಾನುವಾರ ಪಾರ್ಶ್ವವಾಯುಗೆ ತುತ್ತಾಗಿದ್ದರು.ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ ಈ ವಿಚಾರವನ್ನು ಮಗನಿಗೆ ತಿಳಿಸಿದ್ದಾರೆ.
ತಾಯಿಗೆ ಅನಾರೋಗ್ಯದ ವಿಚಾರ ಕೇಳಿದ ಕೃಷ್ಣ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಕೃಷ್ಣ ಬದುಕಲಿಲ್ಲ.ಮಗ ಮೃತಪಟ್ಟ ವಿಷಯವನ್ನು ತಾಯಿಗೆ ತಿಳಿಸಿದಾಗ ಅವರೂ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ತಾಯಿ-ಮಗ ಸಾವಿನಲ್ಲೂ ಒಂದಾಗಿದ್ದು ವಿಚಾರ ತಿಳಿದು ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ.