-ಫರ್ವೇಜ್ ಖಾನ್ ಮೃತ ಬಾಲಕ.
ಮೈಸೂರು:ಆಟವಾಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತರಿಬ್ಬರ ನಡುವೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರು ನಗರದ ಸುನ್ನಿಚೌಕ ಬಳಿ ನಡೆದಿದೆ.
17 ವರ್ಷದ ಫರ್ವೇಜ್ ಖಾನ್ ಮೃತ ಬಾಲಕ.
ಆಟವಾಡುವ ವೇಳೆ ಇಬ್ಬರು ಬಾಲಕರ ನಡುವೆ ಗಲಾಟೆಯಾಗಿದ್ದು, ಈ ವೇಳೆ 15 ವರ್ಷದ ಬಾಲಕನೋರ್ವ ಚಾಕುವಿನಿಂದ ಇರಿದಿದ್ದು, ಸ್ಥಳದಲ್ಲೇ ಫರ್ವೇಜ್ ಸಾವನ್ನಪ್ಪಿದ್ದಾನೆ.
ಈ ಕುರಿತು ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.